News Karnataka Kannada
Monday, April 29 2024
ಮೈಸೂರು

ಹನಿ ಟ್ರ್ಯಾಪ್‌ ಜಾಲ: ಐವರ ಬಂಧನ

Photo Credit :

ಹನಿ ಟ್ರ್ಯಾಪ್‌ ಜಾಲ: ಐವರ ಬಂಧನ

ಮೈಸೂರು: ಯುವತಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್‌ನಲ್ಲಿ ತೊಡಗಿದ್ದ ಐವರನ್ನು ಇಲ್ಲಿನ ಕುವೆಂಪು ನಗರ ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಶ್ರೀಮಂತ ವ್ಯಕ್ತಿಗಳಾಗಿದ್ದು ಸುಲಭದಲ್ಲಿ ಹಣ ಗಳಿಸಲು ಈ ದಂಧೆಗೆ ಇಳಿದಿದ್ದರು ಎನ್ನಲಾಗಿದೆ. ಬಂಧಿತರನ್ನು ನವೀನ್‌, ಶಿವರಾಜು, ಹರೀಶ್‌, ಅನಿತಾ, ವಿಜಿ ಎಂದು ಗುರುತಿಸಲಾಗಿದೆ.

ಬಂಧಿತರು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಸುಂದರ ಯುವತಿಯರ ಮೂಲಕ ಶ್ರೀಮಂತ ಯುವಕರನ್ನು ಸಂಪರ್ಕಿಸುತಿದ್ದರು. ನಂತರ ಅವರನ್ನು ಮನೆಗೆ ಕರೆಸಿಕೊಂಡು ಲೈಂಗಿಕ ಸಂಪರ್ಕದ ವೇಳೆ ಹಿಡನ್‌ ಕ್ಯಾಮೆರಾದ ಮೂಲಕ ಗೌಪ್ಯ ವೀಡಿಯೋ ರೆಕಾರ್ಡಿಂಗ್‌ ಮಾಡಿಟ್ಟುಕೊಳ್ಳುತಿದ್ದರು. ಅಮೇಲೆ ಇದನ್ನು ಬಳಸಿ ಅವರಿಂದ ಲಕ್ಷ ಗಟ್ಟಲೆ ಹಣ ವಸೂಲಿ ಮಾಡುತಿದ್ದರು. ಗೌರವ ಮರ್ಯಾದೆಗೆ ಅಂಜಿ ಸಂತ್ರಸ್ತರು ಹಣ ಪಾವತಿಸುತಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಇವರು ಮೈಸೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಇವರ ಜಾಲಕ್ಕೆ ಸಿಲುಕಿ ಕಿರುಕುಳ ತಾಳಲಾರದ ವ್ಯಕ್ತಿಯೊಬ್ಬರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವ್ಯಕ್ತಿಯ ವೀಡಿಯೋ ಇಟ್ಟುಕೊಂಡು ಆರೋಪಿಗಳು 31 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ.

ಮೊಕದ್ದಮೆ ದಾಖಲಿಸಿಕೊಂಡ ಪೋಲೀಸರು ಆರೋಪಿಗಳ ಬಂಧನಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದರು. 

ಇದೀಗ ಹೈಪ್ರೊಪೈಲ್ ವ್ಯಕ್ತಿಗಳೂ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು