News Karnataka Kannada
Saturday, May 18 2024
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಬಾಡಿಗೆಗೆ ಬುಲೆಟ್ ಬೈಕ್…

Photo Credit :

ಸಾಂಸ್ಕೃತಿಕ ನಗರಿಯಲ್ಲಿ ಬಾಡಿಗೆಗೆ  ಬುಲೆಟ್ ಬೈಕ್...

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಡಿಗೆಗ ಬುಲೆಟ್ ಬೈಕ್ ಗಳನ್ನು ಕೈಗೆಟಕುವ ಬಾಡಿಗೆ ದರದಲ್ಲೇ ಕೊಂಡು ಓಡಿಸಿ ಆನಂದಿಸುವ ಅವಕಾಶ ಇಲ್ಲಿದೆ.

Missed chance to ride bullet? Visit Mysuru-1
ವಿಕೆಂಡ್ ರೈಡ್ ಅನ್ನೋ ಖಾಸಗಿ ಸಂಸ್ಥೆ ಇಂತಹದೊಂದು ಜನಸ್ನೇಹಿ ಕೊಡುಗೆಯನ್ನು ನೀಡಿದ್ದು ಕಳೆದ 2 ತಿಂಗಳಿಂದ ಈ ಅವಕಾಶವನ್ನು ಸಾಂಸ್ಕೃತಿಕ ನಗರಿ ಜನತೆ ಬಳಸಿಕೊಂಡು ಆನಂದಿಸಿದ್ದಾರೆ.  ಖಾಸಗಿ ಸಂಸ್ಥೆಯಾದ ವಿಕೆಂಡ್ ನಾಗರೀಕರಿಗೆ ಹಲವು ಬೈಕ್ ಗಳನ್ನು ಬಾಡಿಗೆಗೆ ನೀಡುತ್ತಿದೆ.

ಎಲ್ಲಾ ವಿಧವಾದ ಬುಲೆಟ್ ಗಳು ಸೇರಿ ರಾಯಲ್ ಎನ್ ಫೀಲ್ಡ್, ಹಾಲಿಡೆವಿಡ್ ಸನ್, ಟ್ರಫಂ, ಡೆಕೂಟಿ ಹಾಗೂ ಜನ ಸಾಮಾನ್ಯರು ಬಳಸಬಹುದಾದ ಹೋಂಡಾ ಆಕ್ಟಿವಾ, ವಿದ್ಯುತ್ ಚಾಲಿತ ಬೈಸಿಕಲ್ ಗಳೂ ಸಹ ಬಾಡಿಗೆಗೆ ಲಭ್ಯವಿದೆ. ಗಂಟೆಗೆ 10 ರೂ ನಿಂದ 650 ರೂ ವರೆಗೆರೆ ಬಾಡಿಗೆ ಪಡೆಯುವ ಸಂಸ್ಥೆ ದಿನಕ್ಕೆ 1000 ದಿಂದ 7500 ವರೆಗೂ ಬಾಡಿಗೆ ಪಡೆಯುತ್ತದೆ. ವಿದ್ಯುತ್ ಚಾಲಿತ ಬೈಸಿಕಲ್  ಒಂದು ಗಂಟೆಗೆ 10ರೂ, 15 ಲಕ್ಷದ ಬುಲೆಟ್ ಅನ್ನು ಒಂದು ಗಂಟೆಗೆ 650 ರೂ ನೀಡಿ ಬಾಡಿಗೆಗೆ ನಿಗದಿ ಪಡಿಸಲಾಗಿದೆ.

ಬಾಡಿಗೆಗೆ ಬೈಕ್ ಕೊಳ್ಳುವವರು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ಐಡಿಕಾರ್ಡ್ ನ ಪ್ರತಿ ನೀಡಿ  ಆಯಾ ಬೈಕ್ ಗೆ ನಿಗದಿ ಪಡಿಸಿರುವ ಬಾಡಿಗೆ ಹಣ ನೀಡಿದರೆ ಸಾಕು, ನಿಮ್ಮ ಇಷ್ಟದ ಬೈಕ್ ನೀವು ಬೇಕೆಂದ ವೇಳೆಗೆ ನಿಮಗೆ ಸಿಗಲಿದೆ. ಅಷ್ಟೂ ಮಾತ್ರವಲ್ಲದೆ ಈ ಬೈಕ್ ರಿಮೋಟ್ ಕಟ್ರೋಲ್ ಅಡಿಯಲ್ಲಿರುತ್ತದೆ. ಇದು ಎಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಸಹ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಅಲ್ಲದೆ ಅದನ್ನು ಬೇಕೆಂದಾಗ ಸ್ಥಗಿತಗೊಳಿಸುವ ಪವರ್ ಕಂಟ್ರೋಲ್ (ಜಿಪಿಎಸ್)ಸಹ ಕಂಪನಿಯ ಹಿಡಿತದಲ್ಲಿರುತ್ತದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಗೋಕುಲಂ ಹಾಗೂ ಇಟ್ಟಿಗೆ ಗೂಡಿನಲ್ಲಿ ಕೇಂದ್ರಗಳಲ್ಲಿ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕಬಿನಿ ಡ್ಯಾಂ, ಬೆಂಗಳೂರು, ಚಿಕ್ಕಮಗಳೂರು ಹಾಗೂ ರಾಜಸ್ತಾನದಲ್ಲೂ ಇವರ ಕೇಂದ್ರಗಳಿದ್ದು ಇಲ್ಲೆಲ್ಲಾ ಬಾಡಿಗೆಗೆ ನಿಮಿಷ್ಟದ ಬೈಕ್ ಸಿಗಲಿವೆ.  ಮೈಸೂರಿನಲ್ಲಿ ಕಳೆದ 2 ತಿಂಗಳಿಂದ ಬಾಡಿಗೆಗೆ ಬೈಕ್ ಗಳನ್ನು ನೀಡುತ್ತಿದ್ದೇವೆ.  1000 ಕ್ಕೂ ಹೆಚ್ಚು ಮಂದಿ ಈ ಬಗ್ಗೆ ಮಾಹಿತಿ ಪಡೆದಿದ್ದು, 200 ಕ್ಕೂ ಹೆಚ್ಚು ಮಂದಿ ಬಾಡಿಗೆಗೆ ವಿವಿಧ ಬೈಕ್ ಗಳನ್ನು ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು