News Karnataka Kannada
Thursday, May 02 2024
ಮೈಸೂರು

ಶಾಸಕ ಚಿಕ್ಕಮಾದು ನಿಧನಕ್ಕೆ ಗಣ್ಯರಿಂದ ಅಂತಿಮ ನಮನ

Photo Credit :

ಶಾಸಕ ಚಿಕ್ಕಮಾದು ನಿಧನಕ್ಕೆ ಗಣ್ಯರಿಂದ ಅಂತಿಮ ನಮನ

ಮೈಸೂರು: ಬಹು ಅಂಗಾಗ ವೈಫಲ್ಯದಿಂದ ಮೃತ ಪಟ್ಟಿರುವ ಹೆಚ್.ಡಿ ಕೋಟೆ ಶಾಸಕ ಚಿಕ್ಕಮಾದು ಅವರ ಪಾರ್ಥೀವ ಶರೀರಕ್ಕೆ ಶಾಸಕರಾದ ಜಿ.ಟಿ ದೇವೇಗೌಡ, ಹೆಚ್.ಪಿ ಮಂಜುನಾಥ್, ಸಾ.ರಾ ಮಹೇಶ್, ಮಾಜಿ ಸಂಸದ ಹೆಚ್.ವಿಶ್ವನಾಥ್, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಅಂತಿಮ ನಮನ ಸಲ್ಲಿಸಿದರು.

ಕಳೆದ ಒಂದು ತಿಂಗಳಿನಿಂದ ಬಹು ಅಂಗಾಗ ವೈಫಲ್ಯದಿಂದ ಬಳಲಿತ್ತಿದ್ದ ಹೆಚ್.ಡಿ ಕೋಟೆ ಶಾಸಕ ಚಿಕ್ಕಮಾದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕರು ನಿನ್ನೆ ಮಧ್ಯರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಗರದ ವಿಜಯನಗರದಲ್ಲಿರುವ ಚಿಕ್ಕಮಾದು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಬೆಳಗ್ಗೆ 9.30ರವರೆಗೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಎಚ್.ಡಿ.ಕೋಟೆಗೆ ವಿಶೇಷ ವಾಹನದಲ್ಲಿ ಪಾರ್ಥವ ಶರೀರವನ್ನ ಹೆಚ್.ಡಿ ಕೋಟೆಗೆ ರವಾನಿಸಲಾಗಿದ್ದು 12 ಗಂಟೆಯ ನಂತರ ಪಾರ್ಥಿವ ಶರೀರ ಹುಣಸೂರಿಗೆ ತೆರಳಿ ನಂತರ ಹೊಸರಾಮನಹಳ್ಳಿ ಗೆ ಬರಲಿದ್ದು, 6 ಗಂಟೆ ವೇಳೆಗೆ ಚಿಕ್ಕಮಾದು ಅವರ ಹುಟ್ಟೂರಾದ ಹೊಸರಾಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇನ್ನೂ ಮೈಸೂರಿನಿಂದ ಕೋಟೆಯತ್ತ ಸಾಗುತ್ತಿರುವ ಶಾಸಕ ಚಿಕ್ಕಮಾದು ಪಾರ್ಥಿವ ಶರೀರಕ್ಕೆ, ರಸ್ತೆಯುದ್ದಕ್ಕೂ ಜನರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಚಿಕ್ಕಮಾದು ಅವರ ಪಾರ್ಥಿವ ಶರೀರಕ್ಕೆ ಅವರ ಅಪಾರ ಅಭಿಮಾನಿಗಳಿಂದ ದರ್ಶನ ಪಡೆಯುತ್ತಿರುವುದರಿಂದ ನಿಧಾನವಾಗಿಯೇ ಸಾಗುತ್ತಿರೋವ ಚಿಕ್ಕಮಾದು ಪಾರ್ಥಿವ ಶರೀರ ಪ್ರಮುಖ ಗ್ರಾಮಗಳಲ್ಲಿ ನಿಂತು ಚಿಕ್ಕಮಾದು ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಶಾಸಕ ಚಿಕ್ಕಮಾದು ಅವರ ಅಂತಿಮ ದರ್ಶನ ಪಡೆಯಲು ಶಾಸಕರಾದ ಜಿ.ಟಿ ದೇವೇಗೌಡ, ಹೆಚ್.ಪಿ ಮಂಜುನಾಥ್, ಸಾ.ರಾ ಮಹೇಶ್, ಮಾಜಿ ಸಂಸದ ಹೆಚ್.ಚ್ ವಿಶ್ವನಾಥ್, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಚಿಕ್ಕಮಾದು ಅವರ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಚಾಮುಂಡೇಶ್ದರಿ ಶಾಸಕ ಜಿ.ಟಿ ದೇವೇಗೌಡ, ನಾನು ಚಿಕ್ಕಮಾದು ಒಳ್ಳೆಯ ಸ್ನೇಹಿತರಾಗಿದ್ವಿ, ದೇವರಾಜು ಅರಸು ವಿರುದ್ದ ಚಿಕ್ಕಮಾದು ಸ್ಪರ್ಧೆ ಮಾಡಿದ್ರು, ಹುಣಸೂರು ,ಹೆಚ್ ಡಿ ಕೋಟೆ ಶಾಸಕರಾಗಿ ನಂತರ ಹೆಚ್ .ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ವಿಧಾನ ಪರಿಷತ್ ಸದಸ್ಯರಾಗಿಯೂ ಕೂಡ ಆಗಿ ಸೇವೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ರು ಬಹುಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ರು ಅಮೇರಿಕಾಗೂ ತೆರಳಿ ಚಿಕಿತ್ಸೆ ಪಡೆದಿದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಸಂತಾಪ: ಶಾಸಕ ಚಿಕ್ಕಮಾದು ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಂತಾಪ ವ್ಯಕ್ತ ಪಡಿಸಿದ್ದು, ಚಿಕ್ಕಮಾದು ಅವರ ನಿಧನದ ಸುದ್ದಿ ಕೇಳಿ ನನಗೆ ಬಹಳ ನೋವಾಗಿದೆ. ನಾವೆಲ್ಲ ಒಬ್ಬ ಸಜ್ಜನ ಹಾಗು ಸರಳ ವ್ಯಕ್ತಿತ್ವದ ನಾಯಕನನ್ನು ಕಳೆದು ಕೊಂಡಿದ್ದೀವಿ. ಮೃದು ಸ್ವಭಾವದ ಚಿಕ್ಕಮಾದು ಅವರನ್ನು ಕಳೆದುಕೊಂಡು ತೀವ್ರ ಆಘಾತವಾಗಿದೆ, ಸಹೋದರರಂತಿದ್ದ ಚಿಕ್ಕಮಾದು ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ. ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ತುಂಬಲಿ ಎಂದು ಸಂತಾಪ ಸೂಚಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅಂತ್ಯಸಾಂಸ್ಕರದಲ್ಲಿ ಭಾಗಿ: ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿರುವ ಹೆಚ್.ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಇನ್ನೂ ಚಿಕ್ಕಮಾದು ಅವರ ಅಂತ್ಯಸಂಸ್ಕಾರ ನಡೆಯುವ ಹೊಸರಾಮನಹಳ್ಳಿ ಗೆ ಹೆಚ್.ಡಿ ಕುಮಾರಸ್ವಾಮಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು