News Karnataka Kannada
Tuesday, May 07 2024
ಮೈಸೂರು

ವಿಶ್ವ ಹೃದಯ ದಿನಾಚರಣೆಯಲ್ಲಿ ಹೃದಯ ತಜ್ಞರಿಗೆ ಸನ್ಮಾನ

New Project 2021 09 29t181140.751
Photo Credit :

ಮೈಸೂರು: ವಿಶ್ವ ಹೃದಯ ದಿನಾಚರಣೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ನುರಿತ ಹೃದಯ ತಜ್ಞರನ್ನು ಸನ್ಮಾನಿಸಿ ಅಭಿನಂದಿಸಲಾಯಿತು

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ನುರಿತ ಹೃದಯ ತಜ್ಞರಾದ ಸುಯೋಗ್ ಆಸ್ಪತ್ರೆಯ ಡಾ. ಎಸ್ ಪಿ ಯೋಗಣ್ಣ, ನಾರಾಯಣ ಹೃದಯಾಲಯದ ಡಾ.ರವಿ, ಡಾ. ರಾಜೇಂದ್ರ, ಮುತ್ತಿನ ಡಾ. ಅಹ್ಮದ್ ಕೆ ಅಫ್ಜಲ್ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಮೂಡಾ ಅಧ್ಯಕ್ಷ ಹೆಚ್.ವಿ‌ ರಾಜೀವ್ ಅವರು, ಸಮಾಜದಲ್ಲಿ ಮನುಷ್ಯನ ಜೀವನಕ್ರಮದ ಒತ್ತಡದಿಂದ ಮತ್ತು ಆಹಾರ ಪದ್ದತಿಯ ಬದಲಾವಣೆಯಿಂದ ಆರೋಗ್ಯ ಹದಗೆಡುತ್ತಿದೆ ಆದರೆ ಅವೆಲ್ಲಕ್ಕೂ ನಿರಂತರ ದೈಹಿಕ ಚಟುವಟಿಕೆ ಮತ್ತು ವ್ಯದ್ಯರ ಸಲಹೆ ಮತ್ತು ಆರೋಗ್ಯ ತಪಾಸಣೆಯಿಂದ ಹೃದಯ ಸಮತೋಲನ ಉತ್ತಮವಾಗಿ ಕಾಪಾಡಿಕೊಳ್ಳಬಹುದಾಗಿದೆ. ಮೋದಿಜೀ ಅವರ ಕಲ್ಪನೆಯಂತೆ ಬಡವರ್ಗಕ್ಕೆ ಆರೋಗ್ಯ ವಿಷಯದಲ್ಲಿ ಸಹಕಾರವಾಗುಂತೆ ಭಾರತದಲ್ಲಿ ಆಯುಷ್ಮಾನ್ ಭಾರತ್ ಕೋಟ್ಯಂತರ ಬಡವರ್ಗದ ಕುಟುಂಬಕ್ಕೆ ಆಸರೆಯಾಗಿದೆ. ಕಡುಬಡ ವರ್ಗ ಮತ್ತು ಶ್ರೀಮಂತರ ಮಧ್ಯೆ ಇರುವ ಮಧ್ಯಮವರ್ಗದವರಿಗೂ ಸಹ ಆರೋಗ್ಯ ವಿಷಯದಲ್ಲಿ ಸಹಕಾರವಾಗುವಂತೆ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ ಎಂದರು

ಬಿಜೆಪಿ ನಗರಾಧ್ಯಕ್ಷ‌ ಟಿಎಸ್. ಶ್ರೀವತ್ಸ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಸಂಪಾದನೆಗೆ ಒತ್ತು ನೀಡುತ್ತಿದ್ದು, ತನ್ನ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಮೈ ಮರೆಯುತ್ತಿದ್ದಾನೆ, ಆರೋಗ್ಯವಂತನೇ ನಿಜವಾದ ಶ್ರೀಮಂತ ಎನ್ಮುವುದು ಕೊರೊನಾ ಎಲ್ಲರಿಗೂ ತೋರಿಸಿಕೊಟ್ಟಿದೆ. ಹೃದಯಕ್ಕೆ ಹಾನಿಯಾಗುವ ವಿಷಯಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಮೊದಲ ಹಂತದಲ್ಲೇ ಜಾಗೃತರಾದರೆ ಒಳ್ಳೆಯದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಪಿ ಯೋಗಣ್ಣ ಅವರು ಖಾಸಗಿ ಆಸ್ಪತ್ರೆಗಳು ದುಬಾರಿ ಎಂದು ಕೆಲವರಲ್ಲಿ ತಪ್ಪು ಕಲ್ಪನೆಯಿದೆ ಆದರೆ ಕಾನೂನು ಪ್ರಕಾರ ರೋಗಿಯ ದಾಖಲಾತಿಗೂ ಮುನ್ನ ಕೆಲವು ತಪಾಸಣೆಗಳು ಕಡ್ಡಾಯ ಆಧುನಿಕ ಯಂತ್ರೋಪಕರಣಗಳ ನಿರ್ವಹಣೆ ಮತ್ತು ಸರ್ಕಾರದ ದರದ ಶುಲ್ಕದ ಅನುಸಾರ ನಿಗಧಿಪಡಿಸಲಾಗಿರುತ್ತದೆ. ಆದರೆ ಎಲ್ಲ ತಪಾಸಣೆಗಳು ಮಾಡುವುದರಿಂದ ಪ್ರಾರ್ಥಮಿಕ ರೋಗಲಕ್ಷಣವನ್ನು ಪತ್ತೆ ಹಿಡಿದು ಗುಣಪಡಿಸಿಕೊಳ್ಳಬಹುದಾಗಿದೆ ಎಂದರು

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮಿದೇವಿ, ಮೈಸೂರು ಮಹಾನಗರ ಪಾಲಿಕೆ ನಾಮ ನಿರ್ದೇಶಕ ಕೆಜೆ ರಮೇಶ್, ಜೋಗಿ ಮಂಜು,

ಕೆಂಪೇಗೌಡರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ್ ಗೌಡ, ಅಪೂರ್ವ ಸುರೇಶ್, ಮಹೇಂದ್ರ ಎಂ ಶೈವ, ನವೀನ್ ಕೆಂಪಿ, ಸದಾಶಿವ್, ಸೂರಜ್, ಗಣೇಶ್ ಇನ್ನಿತರರು ಇದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು