Categories: ಮೈಸೂರು

ರಾಜಕಾರಣಿಗಳಿಂದಲೇ ಡ್ರಗ್ಸ್‌ ದಂದೆ ;  ಮುತಾಲಿಕ್‌ ಆರೋಪ

ಮೈಸೂರು: ರಾಜ್ಯದಲ್ಲಿ  ರಾಜಕಾರಣಿಗಳು ಮತ್ತು ಅವರ ಮಕ್ಕಳೇ  ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಇದರಿಂದಲೇ ಇದು ಇಷ್ಟೊಂದು ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಸೂರಿನ   ಹೈಸ್ಕೂಲ್  ಮತ್ತು ಕಾಲೇಜುಗಳಲ್ಲಿ  ಹೆರಾಯ್ನ್, ಮಾದಕ ಪದಾರ್ಥ ಮಾರಾಟವಾಗುತ್ತಿದೆ.  ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದಾರೆ. ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡ್ತಾರೆ ಎಂದು ಆರೋಪಿಸಿದರು.

ಇವತ್ತಿನಿಂದ ನಾವು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮೈಸೂರಿನ ಹಲವು ಕಾಲೇಜಿನಲ್ಲಿ ಈ ಜಾಲ ಇದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜನಾಂದೋಲನ ಶುರು ಮಾಡುತ್ತೇವೆ ಎಂದರು.

ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್ ಗಳ ಮೇಲೆ ದಾಳಿ ಮಾಡಿ. ನಾನು ಚಾಲೆಂಜ್ ಮಾಡುತ್ತೇನೆ. ಹಾಸ್ಟೆಲ್ ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಆರೋಪಿಸಿದರು.

ತಮ್ಮ  ಬಳಿ ಡ್ರಗ್ಸ್‌  ಮಾಫಿಯಾದಲ್ಲಿ ತೊಡಗಿರುವ  32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Desk

Recent Posts

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ

ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ…

3 mins ago

ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

  ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16…

41 mins ago

‘ಜೆಟ್ ಏರ್ವೇಸ್’ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ

ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

45 mins ago

ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೆದರಿಸಲು ಹೋಗಿ ಜಿಮ್​​ ಟ್ರೈನರ್ ಸಾವು

ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ…

55 mins ago

ಟಿ 20 ವಿಶ್ವಕಪ್​​ನಲ್ಲಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ ಕೆಎಮ್​ಫ್​

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಎಮ್​ಫ್​ (ಕರ್ನಾಟಕ ಹಾಲು ಮಹಾಮಂಡಳಿ) ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್ ತಂಡಕ್ಕೆ ಪ್ರಾಯೋಕತ್ವ ನೀಡಿದೆ.

1 hour ago

ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ…

2 hours ago