News Karnataka Kannada
Sunday, May 12 2024
ಮೈಸೂರು

ನಕಲಿ ರೆಮ್ ಡಿಸಿವಿರ್ ಔಷಧ ಮಾರಾಟದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

Photo Credit :

ನಕಲಿ ರೆಮ್ ಡಿಸಿವಿರ್ ಔಷಧ ಮಾರಾಟದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮೈಸೂರು, :- ಕೋವಿಡ್-19 ಸೋಂಕಿತ ರೋಗಿಗಳಿಗೆ ನೀಡುತ್ತಿದ್ದು ರೆಮ್ ಡಿಸಿವಿರ್ ಚುಚ್ಚುಮದ್ದನ್ನು ನಕಲು ಮಾಡಿ ಆರೋಪಿಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ನಜರ್‍ ಬಾದ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 46/2021 ಕಲಂ 276, 279, 420 ರೆ:ವಿ 34 ಐಪಿಸಿ ಮತ್ತು ಡ್ರಗ್ಸ್ ಅಂಡ್ ಕಾಸ್ಮಟಿಕ್ಸ್ ಆಕ್ಟ್ 1940ರ ಕಲಂ 27 ರೀತ್ಯಾ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವು ಅತಿಸೂಕ್ಷ್ಮ ಹಾಗೂ ಗಂಭೀರ ಪ್ರಕರಣವಾಗಿದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿ.ಸಿ.ಬಿ.ಘಟಕಕ್ಕೆ ವಹಿಸಲಾಗಿತ್ತು. ನಕಲಿ ರೆಮ್‌ ಡಿಸಿವಿರ್ ಔಷಧ ಮಾರಾಟದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮೆಡಿಕಲ್ ರೆಪ್ರಸೆಂಟೇಟಿವ್ ನನ್ನು ಬಂಧಿಸಿದ್ದಾರೆ.

ಗಿರೀಶ್.ಕೆ. ಬಿನ್ ಕೊಣೇಗೌಡ, (34) ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದ ಈತನನ್ನು 19/04/2021ರಂದು ಬಂಧಿಸಿದ್ದು, ಇತರೇ ಇಬ್ಬರು ಆರೋಪಿಗಳಾದ ಪ್ರಶಾಂತ್ ಎ.ಡಿ. ,ಮಂಜುನಾಥ್. ಎಂ.ಆರ್. ಎಂಬುವವರನ್ನು 20.04.2021 ಬಂಧಿಸಲಾಗಿತ್ತು.ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಸುಜಯ್. ಜಿ. ಬಿನ್ ಗೋವಿಂದ. ಎಂಬಾತನನ್ನು 25-04-2021 ರಂದು ಮೈಸೂರು ನಗರದ ಸಾತಗಳ್ಳಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿ ಈತನು ವೃತ್ತಿಯಲ್ಲಿ ಮೆಡಿಕಲ್ ರೆಪ್ರಸೆಂಟಿಟೀವ್ ಆಗಿದ್ದು, ಗಿರೀಶ್‌ ನಿಂದ ನಕಲು ರೆಮ್ ಡಿಸಿವಿರ್ ಚುಚ್ಚುಮದ್ದುಗಳನ್ನು ಸ್ವೀಕರಿಸಿ ತನಗೆ ಪರಿಚಯವಿದ್ದ ಮೆಡಿಕಲ್ ಸ್ಟೋರ್ಸ್ ಹಾಗೂ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದನೆಂಬ ಅಂಶ ಬೆಳಕಿಗೆ ಬಂದಿದೆ. ತನಿಖಾ ಸಮಯದಲ್ಲಿ ಈತನಿಂದ 4100 ರೂ. ನಗದು ಹಣ ಹಾಗೂ ಒಂದು ಮೊಬೈಲ್ ಪೋನ್‍ನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು