News Karnataka Kannada
Sunday, May 19 2024
ಮೈಸೂರು

ದಾಖಲೆ ಮತ ಪಡೆದು ಯದುವೀರ್ ರೇಸ್ ಕ್ಲಬ್ ಗೆ ಆಯ್ಕೆ

Photo Credit :

ದಾಖಲೆ ಮತ ಪಡೆದು ಯದುವೀರ್ ರೇಸ್ ಕ್ಲಬ್ ಗೆ ಆಯ್ಕೆ

ಮೈಸೂರು: ಮೈಸೂರಿನ ರೇಸ್ ಕ್ಲಬ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೆ 176 ದಾಖಲೆಯ ಮತಗಳನ್ನು ಪಡೆದು ನೂತನ ಸದಸ್ಯರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆಯಾಗಿದ್ದಾರೆ.


250 ಸದಸ್ಯ ಬಲವನ್ನು ಹೊಂದಿರುವ ಕ್ಲಬ್ ನಲ್ಲಿ 10 ಸ್ಥಾನಗಳು ಖಾಲಿಯಿದ್ದು ಇದೇ ಪ್ರಥಮ ಬಾರಿಗೆ ತಮ್ಮ ಜೀವನದ ಮೊದಲ ಚುನಾವಣೆಯನ್ನು ಎದುರಿಸಿದ ಯದುವೀರ್ ಪ್ರಥಮ ಪಯತ್ನದಲ್ಲೆ ಅತ್ಯಧಿಕ ಮತಗಳನ್ನು ಪಡೆದು ನೂತನವಾದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಜಯಚಾಮರಾಜೇಂದ್ರ ಒಡೆಯರ್ ಮೈಸೂರು ರೇಸ್ ಕ್ಲಬ್ ಅನ್ನು ಸ್ಥಾಪಿಸಿದರು. ಯದುವೀರ್ ಅವರ ತಂದೆ ದಿ. ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಹ ಹಿಂದೆ ಚುನಾವಣೆಯಲ್ಲಿ ಗೆಲ್ಲುವನ್ನು ಸಾಧಿಸಿದರು. ಆದರೆ ಅವರ ಅಕಾಲಿಕ ಮರಣದ ನಂತರ ಮೈಸೂರು ರೇಸ್ ಕ್ಲಬ್ನ ಸದ್ಯಸರ ಸ್ಥಾನ ಖಾಲಿಯಾಗಿತ್ತು ಆಸ್ಥಾನಕ್ಕೆ ಸ್ಪರ್ದಿಸಿದ್ದ ಯದುವೀರ್ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾದಿಸಿದ್ದಾರೆ. ಅಂದಿನ ಕಾಲದಿಂದಲೂ ರಾಜ ಮನೆತನದವರು ರೇಸ್ ಕ್ಲಬ್ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ.

ಈ ಚುನಾವಣೆಯಲ್ಲಿ ಗೆಲ್ಲುವಾ ಮುಖಾಂತರ ಮುಂದೊಂದು ದಿನ ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಏಕೆಂದರೆ ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ತಾಯಿ ಪ್ರಮೋದಾದೇವಿಯೊಡನೆ ಕೆಲವು ಸಮಯ ಅವರೂಂದಿಗೆ ಸಮಲೋಚನೆಯನ್ನು ನಡೆಸಿರುವುದು ಈ ಚುನಾವಣೆಯ ಗೆಲ್ಲುವು ಅದಕ್ಕೆ ಪುಷ್ಠಿ ನೀಡುತ್ತದೆ.     

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು