News Karnataka Kannada
Friday, May 03 2024
ಮೈಸೂರು

ತಲಾಕ್ ನೀಡದೆ ಮೂರು ಮದುವೆಯಾದ ಮಹಿಳೆ ವಿರುದ್ದ ಎಫ್ಐಆರ್ ದಾಖಲಿಸುವಂತೆ ಆದೇಶ

Photo Credit :

ತಲಾಕ್ ನೀಡದೆ ಮೂರು ಮದುವೆಯಾದ ಮಹಿಳೆ ವಿರುದ್ದ ಎಫ್ಐಆರ್ ದಾಖಲಿಸುವಂತೆ ಆದೇಶ

ಮೈಸೂರು: ಮೊದಲ ಇಬ್ಬರು ಗಂಡಂದಿರಿಗೆ ತಲಾಕ್ ನೀಡದೆ ಮೂರನೇ ಮದುವೆಯಾದ ಮಹಿಳೆ ಮತ್ತು ಕುಟುಂಬದವರ ವಿರುದ್ದ ಐಫ್ಐಆರ್ ದಾಖಲಿಸುವಂತೆ ನಗರದ ನ್ಯಾಯಾಲಯ ನರಸಿಂಹರಾಜ ಪೊಲೀಸರಿಗೆ ಆದೇಶ ನೀಡಿದೆ.

ಮೂರು ಮದುವೆಯಾಗಿರುವ ನಜೀಮಾ ಆಸ್ಮಾ. ಆಕೆಯ ತಂದೆ ಅಬ್ದುಲ್ ಗಫಾರ್, ತಾಯಿ ಅಸೀಬಾ ಕಾನಂ, ಸೋದರ ನಿಜಾಮ್ ಷರೀಫ್ ಮತ್ತು ಆಕೆಯ ಮೂರನೇ ಪತಿ ಇಸ್ರಾ ಷರೀಫ್ ವಿರುದ್ದ ಐಪಿಸಿ 107, 108, 120/ಅ, 120/ಬಿ, 494, 496 ರೆಡ್ ವಿತ್ 34 ಅಡಿ ಪ್ರಕರಣ ದಾಖಲಿಸುವಂತೆ ಮೈಸೂರಿನ ಮೂರನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ನರಸಿಂಹರಾಜ ಪೊಲೀಸರಿಗೆ ಆದೇಶ ನೀಡಿದ್ದಾರೆ.
 
ನಜೀಮಾ ಆಸ್ಮಾ ಶೋಕಿಯ ಹೆಣ್ಣು ಈಕೆ 2003ರಲ್ಲಿ ಅಸೀಪ್ ಅಲಿ ಫಾರೂಕಿ, 2008ರಲ್ಲಿ ಫೈಜಲ್ ಅಹಮದ್ ಖಾನ್ ಅವರನ್ನ ವಿವಾಹವಾಗಿದ್ದಳು. ಆದರೆ ಇವರಿಬ್ಬರಿಂದ ತಲಾಕ್ ಪಡೆಯದೆ ಮೂರನೇ ಮದುವೆಯಾಗಿದ್ದು ಇದನ್ನು ಪ್ರಶ್ನಿಸಿ ಎರಡನೇ ಪತಿ ಫೈಜಲ್ ಅಹಮದ್ ಖಾನ್ ನ್ಯಾಯಾಲಯದಲ್ಲಿ ಮೊಕ್ಕದಮ್ಮೆ ದಾಖಲಿಸಿದ್ದು, ನಜೀಮಾ ಆಸ್ಮಾ 2003 ಆಗಸ್ಟ್ 29ರಂದು ಚೆನ್ನಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ಮುಸ್ಲಿಂ ವಿವಾಹ ಕಾಯ್ದೆ ಅಡಿ ಆಸೀಫ್ ಅಲಿ ಫಾರೂಕಿ ಎಂಬಾತನನ್ನ ರಿಜಿಸ್ಟ್ರಾರ್ ಮದುವೆಯಾಗಿದ್ದು, ಅದನ್ನ ಮರೆಮಾಚಿ 2008ರ ಜೂನ್ 29ರಂದು ನನ್ನನ್ನು(ಫೈಜಲ್ ಅಹಮದ್ ಖಾನ್ ಎರಡನೇ ಗಂಡ) ಮದುವೆಯಾಗಿದ್ದು ಇತ್ತೀಚೆಗೆ ನನ್ನಿಂದ ದೂರವಾಗಿ ತಲಾಕ್ ಪಡೆಯದೆ ಇಸ್ರಾ ಷರೀಫ್ ಎಂಬಾತನನ್ನ ಮೂರನೇ ಮದುವೆಯಾಗಿದ್ದಾಳೆ. ಇದನ್ನು ಪ್ರಶ್ನೆ ಮಾಡಿದರೆ ನನ್ನ ಹಾಗೂ ನನ್ನ ಕುಟುಂಬದ ವಿರುದ್ದ ದೂರು ದಾಖಲಿಸಿದ್ದಾಳೆ.

ಇದರಿಂದ ಮನನೊಂದು ಎರಡನೇ ಪತಿ ಮೈಸೂರಿನ ನ್ಯಾಯಾಲಯದಲ್ಲಿ ಮೂರು ಮದುವೆಯಾಗಿರುವ ನಜೀಮಾ ಆಸ್ಮಾ ಹಾಗೂ ಅವರ ಕುಟುಂಬದವರ ಮೇಲೆ ದೂರು ದಾಖಲಿಸಿದುವಂತೆ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವೂ ತಲಾಕ್ ನೀಡದೆ ಮದುವೆಯಾಗುದನ್ನು ಕಸುಬಾಗಿ ಮಾಡಿಕೊಂಡಿರುವ ನಜೀಮಾ ಆಸ್ಮಾ ಹಾಗೂ ಅವರ ಕುಟುಂಬದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ  ನರಸಿಂಹರಾಜ ಪೊಲೀಸರಿಗೆ ಆದೇಶ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು