Categories: ಮೈಸೂರು

ಜೈಲಿನಲ್ಲಿ ಅತ್ಯಾಚಾರಿಗಳ ಗುರುತು ಪತ್ತೆ ಹಚ್ಚಿದ ಸಂತ್ರಸ್ತೆ

ಮೈಸೂರು: ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಗುರುವಾರ ಮೈಸೂರಿನ ಜೈಲಿನಲ್ಲಿ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಸಿದಳು. ಪ್ರಕರಣದಕ್ಕೆ ಸಂಬoಧಿಸಿದoತೆ ಯಾವುದೇ ಹೇಳಿಕೆಯನ್ನು ಪೊಲೀಸರಿಗೆ ನೀಡದಿದ್ದ ಸಂತ್ರಸ್ತೆಯನ್ನು ಮುಂಬೈಗೆ ಹುಡುಕಿಕೊಂಡು ಹೋಗಿ, ಆಕೆಯನ್ನು ಪತ್ತೆ ಹಚ್ಚಿ, ಮನವೊಲಿಸಿದ ಪೊಲೀಸರು, ಮೈಸೂರಿಗೆ ಆಕೆಯನ್ನು ಪೋಷಕರೊಂದಿಗೆ ಕರೆತಂದಿದ್ದರು.

ಬುಧವಾರ ನ್ಯಾಯಾಲಯ ಹಾಗೂ ತನಿಖಾಧಿಕಾರಿಯ ಮುಂದೆ ಪ್ರಕರಣಕ್ಕೆ ಸಂಬoಧಿಸಿದoತೆ ಹೇಳಿಕೆಯನ್ನು ನೀಡಿದ್ದಳು. ಇಂದುಮೈಸೂರಿನ ಜೈಲಿನಲ್ಲಿ ನಡೆದ ಐಡೆಂಟಿಫಿಕೇಷನ್ ಪರೇಡ್ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು. ಎರಡು ವಿಡಿಯೋ ಕ್ಯಾಮಾರಾಗಳನ್ನು ಅಳವಡಿಸಿ ಅದರಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು.

ತಹಶೀಲ್ದಾರರು ಹಾಗೂ ಪೋಲಿಸ್ ತನಿಖಾಧಿಕಾರಿ ಮುಂದೆ ಸಂತ್ರಸ್ತೆಯಿoದ ಐಡೆಂಟಿಫಿಕೇಷನ್ ಪರೇಡ್ ನಡೆಯಿತು. ಪತ್ತೆ ಕಾರ್ಯ 18 ಸುತ್ತುಗಳು ನಡೆಯಿತು. ಸಂತ್ರಸ್ತೆ ವಿದ್ಯಾರ್ಥಿನಿಯ ಪೋಷಕರು ಕೂಡ ಈ ವೇಳೆ ಹಾಜರಿದ್ದರು. ಆ ದಿನ ಧರಿಸಿದ್ದ ಬಟ್ಟೆಗಳನ್ನು ರೇಪಿಸ್ಟ್ ಗಳು ಮತ್ತೆ ಧರಿಸಿದ್ದರು.

ಆರು ಮಂದಿ ಆರೋಪಿಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಅತ್ಯಾಚಾರ ಎಸಗಿದ ರೇಪಿಸ್ಟ್ ಗಳು ಇವರೆ ಎಂದು ಹೇಳಿದ ಸಂತ್ರಸ್ತೆ ಅವರ ಗುರುತು ಹಿಡಿದಳು. ಅತ್ಯಾಚಾರಿಗಳ ಆ ದಿನದ ವರ್ತನೆ, ತೊಟ್ಟ ಬಟ್ಟೆ, ಅವರು ಬಂದಿದ್ದ ವಾಹನ, ಪಾನ ಮತ್ತೆ ಸೇರಿದಂತೆ ಇವೇ ಹಲವು ಮಾಹಿತಿಗಳನ್ನು ತನಿಖಾಧಿಕಾರಿಗಳಿಗೆ ನೀಡಿದಳು. ಈ ವೇಳೆ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ಉಪಸ್ಥಿತರಿದ್ದರು.

Sneha Gowda

Recent Posts

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

14 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

16 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

37 mins ago

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

47 mins ago

ನಾಳೆ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನೆ

ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…

49 mins ago

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

1 hour ago