ಚಾಮರಾಜನಗರ: ಕೊರೊನಾ ನೆಗೆಟಿವ್ ವರದಿ ಇಲ್ಲದಿರುವ ಒಂದು ವಾಹನವನ್ನು ಜಿಲ್ಲೆಯೊಳಗೆ ಬಿಟ್ಟರೂ ಸಸ್ಪೆಂಡ್ ಮಾಡಬೇಕಾಗುತ್ತೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ತಮಳುನಾಡು-ಕರ್ನಾಟಕ ಕೆಕ್ಕನಹಳ್ಳ ಚೆಕ್ ಪೋಸ್ಟ್ ಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೆಗೆಟಿವ್ ವರದಿ ಇಲ್ಲದಿದ್ದರೆ ಗಡಿಯಿಂದ ವಾಪಸ್ ಕಳುಹಿಸಿ. ಯಾವ ಸಮಯದಲ್ಲಿ ಬೇಕಾದರೂ ನಾನುಬಂದು ಪರಿಶೀಲನೆ ನಡೆಸುತ್ತೇನೆ. ಚೆಕ್ ಪೋಸ್ಟ್ ದಾಟಿ ಬಂದ ವಾಹನವನ್ನು ಪರಿಶೀಲಿಸಿದಾಗ ನೆಗೆಟಿವ್ ವರದಿ ಇಲ್ಲದಿದ್ದರೆ ಅದಕ್ಕೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ನೀವೇ ಜವಾಬ್ದಾರರಾಗುತ್ತೀರ ಆದ್ದರಿಂದ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಬೇಕು ಎಂದು ಹೇಳಿದರು.