Categories: ಮೈಸೂರು

ಕಾದಂಬರಿ ಆಧಾರಿತ `ಪರ್ವ’ ನಾಟಕ ಪ್ರದರ್ಶನ ಸೆ.4 ರಿಂದ ಮತ್ತೆ ಪ್ರಾರಂಭ

ಮೈಸೂರು: ಖ್ಯಾತ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ `ಪರ್ವ’ ನಾಟಕ ಪ್ರದರ್ಶನ ಸೆ.4 ರಿಂದ ಮತ್ತೆ ಪ್ರಾರಂಭವಾಗಲಿದೆ.

ಡಾ.ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಮಹಾ ರಂಗಪ್ರಯೋಗವಾಗಿ ಪ್ರಕಾಶ್ ಬೆಳವಾಡಿ ರಂಗರೂಪಗೊಳಿಸಿ, ನಿರ್ದೇಶಿಸಿದ್ದಾರೆ. `ಪರ್ವ’ ಮಹಾ ರಂಗಪ್ರಯೋಗದ ಯಶಸ್ವಿ ಪ್ರದರ್ಶನ ನೀಡಿ, ದೇಶದಾದ್ಯಂತ ದೊಡ್ಡ ಗಮನ ಸೆಳೆದಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಕಾರಣದಿಂದ ಇದರ ಪ್ರದರ್ಶನ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ 7 ಪ್ರದರ್ಶನಗಳು ಮಾತ್ರ ಆಗಿತ್ತು.

ಇದೀಗ ನಿರಂತರ ತಾಲೀಮಿನ ನಂತರ ಸೆಪ್ಟಂಬರ್ 4 ಮತ್ತು 05 ರಂದು ಮತ್ತೆ ಪರ್ವ ನಾಟಕ ಪ್ರದರ್ಶನಗೊಳ್ಳಲಿದೆ. ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ಗಂಟೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಮುಂಗಡ ಟಿಕೆಟ್‌ಗಳನ್ನು ರಂಗಾಯಣದ `ಪರ್ವ’ ಕುಟೀರದಲ್ಲಿ ಕಾಯ್ದಿರಿಸಬಹುದಾಗಿದೆ ಮತ್ತು ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ಇಡೀ ಪ್ರದರ್ಶನವನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

ಎಂದಿನoತೆ ನಾಟಕದಲ್ಲಿ 4 ವಿರಾಮಗಳಿದ್ದು, ಈ ವಿರಾಮಗಳಲ್ಲಿ ಪ್ರೇಕ್ಷಕರಿಗೆ ಉಪಹಾರ ಮತ್ತು ಚಹಾ ಮತ್ತು ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆಯ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರ ರೂ.250 ಗಳಾಗಿದ್ದು, ಕೋವಿಡ್-19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ರಂಗಾಯಣದ ನಿರ್ದೇಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ

Sneha Gowda

Recent Posts

ಮತ್ತಷ್ಟು ಮೇಲಕ್ಕೆ ಎರುತ್ತೀರಿ : ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಕೆಜಿಎಪ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದರು. ಮಂಗಳೂರಿನ ಹೊರವಲಯದ ಕಿನ್ನಿಗೋಳಿ…

15 mins ago

ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ…

33 mins ago

ಆಟವಾಡ್ತಿದ್ದ ಮಗು ಅಪಹರಣ : ಮೂರೇ ದಿನದಲ್ಲಿ ಪತ್ತೆ ಹಚ್ಚಿದ ಬೀದರ್​ ಪೊಲೀಸ್

ಅಪಹರಣಕ್ಕೊಳಗಾದ ಮಗವನ್ನ ಮೂರು ದಿನದಲ್ಲಿಯೇ ಬಬೀದರ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೇ 4 ರಂದು ಬೀದರ್​ನ ಓಲ್ಡ್ ಸಿಟಿಯ…

45 mins ago

ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ : ಹೆಚ್ಚಿದ ಆತಂಕ

ಕೊರೊನಾ ವ್ಯಾಕ್ಸಿನ್ ಮತ್ತು ಕೋವಶೀಲ್ಡ್‌ ಪಡೆದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾತಿಗೆ ಧಂಗಾಗಿರುವ ಜನರಿಗೆ ಇದೀಗ ಕೊರೊನಾ ವ್ಯಾಕ್ಸಿನ್ ಹಿಂಪಡೆದ…

2 hours ago

ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ : ಬೇಲಾ? ಜೈಲಾ? ಇಂದೇ ನಿರ್ಣಾಯಕ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ…

2 hours ago

ಪ್ರತಿಷ್ಠಿತ ಕಂಪನಿಗಳ ನಕಲು ದಂಧೆ : ಆರೋಪಿಗಳು ಸಿಬಿಐ ವಶ

ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್​ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ…

2 hours ago