Categories: ಮೈಸೂರು

ಎನ್ಎಸ್ಎಸ್ ಶಿಬಿರಾರ್ಥಿಗಳಿಂದ ರಸ್ತೆ, ಚರಂಡಿಗಳಿಗೆ ಕಾಯಕಲ್ಪ

ಮಂಡ್ಯ: ವಿಜ್ಞಾನ ಮತ್ತು ವೈಜ್ಞಾನಿಕ ಪ್ರವೃತ್ತಿಗಾಗಿ ಯುವ ಜನತೆ ಎಂಬ ಧ್ಯೇಯವಾಕ್ಯದೊಡನೆ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಂದ ತಾಲೂಕಿನ ಪುಟ್ಟಿಕೊಪ್ಪಲು ಗ್ರಾಮದಲ್ಲಿ ರಸ್ತೆ, ಚರಂಡಿಗಳಿಗೆ ಕಾಯಕಲ್ಪ ಕೊಡುವ ಕಾರ್ಯ ಭರದಿಂದ ಸಾಗಿದೆ.

ಗ್ರಾಮದ ಶ್ರೀ ಕನಕದಾಸ ಪ್ರತಿಮೆ ಮುಂಭಾಗದ ಆವರಣದಲ್ಲಿ ಮಾ.3ರಂದು ಆರಂಭಗೊಂಡಿರುವ ಈ ಸೇವಾ ಯೋಜನೆ ಶಿಬಿರದಲ್ಲಿ ಸುಮಾರು ನೂರು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೂರು ತಂಡಗಳಾಗಿ ಶ್ರಮದಾನದಲ್ಲಿ ತೊಡಗಿದ್ದಾರೆ. ಈ ತಂಡಗಳ ಮೇಲುಸ್ತುವಾರಿ ವಹಿಸಿರುವ ಶಿಬಿರಾಧಿಕಾರಿಗಳಾದ ಲಿಂಗರಾಜು, ಜಗದೀಶ್ ಹಾಗೂ ನೇತ್ರಾವತಿ ಅವರು ಗ್ರಾಮದಲ್ಲಿ ಅತ್ಯಗತ್ಯವಿರುವ ಸ್ವಚ್ಛತೆ, ಚರಂಡಿಗಳ ನಿರ್ಮಾಣ, ಕಟ್ಟೆಗಳ ಪುನಶ್ಚೇತನ, ಚರಂಡಿಗಳ ಹೂಳೆತ್ತುವಿಕೆ ಮುಂತಾದ ಕೆಲಸಗಳನ್ನು ಮಾಡಿಸುವತ್ತ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಮಾ.3ರಂದು ಮಾರನಚಾಕನಹಳ್ಳಿ ಗ್ರಾಪಂ ಅಧ್ಯಕ್ಷ ಡಿ.ಚಿಕ್ಕಯ್ಯ ಅವರು ಶಿಬಿರದ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನಾಗಾನಂದ ಮತ್ತಿತರರು ಪಾಲ್ಗೊಂಡಿದ್ದರು. ಅಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಮಾ.4ರಂದು ಬೆಳಿಗ್ಗೆ ಮಂಡ್ಯದ ಬೆಳಕು ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಸುಮಾರು 50 ಮಂದಿ ತಪಾಸನೆಗೊಳಗಾಗಿದ್ದು, ಅವರಲ್ಲಿ 25 ಮಂದಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದನ್ನು ಪತ್ತೆಹಚ್ಚಿದರು. ಬಳಿಕ ಖ್ಯಾತ ಚರ್ಮವೈದ್ಯ ಡಾ.ಶಂಕರೇಗೌಡರಿಂದ ಉಚಿತ ಚರ್ಮರೋಗ ತಪಾಸಣಾ ಶಿಬಿರ ನಡೆಯಿತು. ಗ್ರಾಮದ ನೂರಕ್ಕೂ ಹೆಚ್ಚುಮಂದಿ ಚಿಕಿತ್ಸೆ ಪಡೆದುಕೊಂಡರು.

ಬಳಿಕ ನಡೆದ ಜನಪದ ಗೀತೆಗಳ ತರಬೇತಿ ಕಾರ್ಯಾಗಾರದಲ್ಲಿ ಗ್ರಾಮದ ಯುವಜನರು ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆನಂತರ ಸಮಗ್ರ ತೋಟಗಾರಿಕೆ ಕೃಷಿ ಬಗ್ಗೆ ತೋಟಗಾರಿಕೆ ಉಪನಿರ್ದೇಶಕ ಎಂ.ಎ.ರಾಜು ಮಾಹಿತಿ ನೀಡಿದರೆ, ಹೈನುಗಾರಿಕೆಯ ಉತ್ಪನ್ನಗಳ ಬಗ್ಗೆ ತಿಳುವಳಿಕೆ ಕುರಿತು ದುದ್ದ ಪಶುವೈದ್ಯಾಧಿಕಾರಿ ಡಾ.ತ್ರಿನೇಶ್ ವಿಚಾರ ಮಂಡಿಸಿದರು.

Desk

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

4 mins ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

15 mins ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

27 mins ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

37 mins ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

43 mins ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

55 mins ago