ಮಂಗಳೂರು: ಕಾರಿನಲ್ಲಿ ಯುವಕರು ಹುಚ್ಚಾಟ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿ ಸಂಪಾಜಿ-ಸುಳ್ಯ ರಸ್ತೆಯಲ್ಲಿ ನಡೆದಿದೆ.
ಕಾರಿನ ಹೊರಭಾಗ ಕುಳಿತು ಪ್ರಯಾಣ ಮಾಡಿದ್ದಾರೆ. ಒಟ್ಟು ಏಳು ಜನ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡಿದ್ದು, ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಪುಂಡಾಟ ನಡೆಸಿದ್ದಾರೆ.
ಸಹ ವಾಹನ ಸವಾರರಿಂದ ವಿಡಿಯೋ ಮಾಡಲಾಗಿದ್ದು, KA09MG5880 ನಂಬರ್ ನ ಕಾರು ಎಂಬ ಮಾಹಿತಿ ತಿಳಿದು ಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

