ಮಂಗಳೂರು: ಯುವ ಲೇಖಕಿ 21 ವರ್ಷದಲ್ಲಿ ಸಾಹಿತಿಕ ಸಾಧನೆ ಮಾಡಿದ ಕುಮಾರಿ ರಿಶೇಲ್ ಬ್ರಿಟ್ನಿ ಫೆರ್ನಾಂಡಿಸ್ ಇವರಿಗೆ ಶ್ರೀ ಉಮಾನಾಥ ಕೋಟ್ಯಾನ್ ಸನ್ಮಾನ್ಯ ಶಾಸಕರು ಮುಲ್ಕಿ ಮೂಡಬಿದ್ರೆ ಕ್ಷೇತ್ರ ಇವರಿಂದ ಸನ್ಮಾನ ನೆರವೇರಿದೆ.

ಹೌದು. . ಯುವ ಲೇಖಕಿ, ವಾಗ್ಮಿ, ಕಾನೂನು ವಿದ್ಯಾರ್ಥಿನಿ ಹಾಗು ಅಂತರಾಷ್ಟ್ರೀಯ ,ರಾಷ್ಟ್ರೀಯ ರಾಜ್ಯ ಹಾಗೂ ಇತರ ಮಟ್ಟದಲ್ಲಿ ಸಾಧನೆ ಮಾಡಿದ ಕು .ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ ಎರಡನೇ ಪುಸ್ತಕ ʻಭಾರತ್ @ 2047ʼ ಭಾರತದ ಸ್ವಾತಂತ್ರ್ಯದ 100ನೇ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಎಷ್ಟು ಮುಖ್ಯ ಎಂಬ ವಿಚಾರಗಳನ್ನು ವಿವಿಧ ಕ್ಷೇತ್ರದಲ್ಲಿ ರೆಶೆಲ್ ಅವರ ಈ ಪುಸ್ತಕ ಬರೆದ ಹಾಗು ಇವರ ಸಾಧನೆಯನ್ನು ಗೌರವಿಸಿ ಶ್ರೀ ಉಮಾನಾಥ ಕೋಟ್ಯಾನ್ ಸನ್ಮಾನ್ಯ ಶಾಸಕರು ಮುಲ್ಕಿ ಮೂಡಬಿದ್ರೆ ಕ್ಷೇತ್ರ ಇವರು ಕು ರೀಶೆಲ್ ಅವರ ಅಪ್ರತಿಮ ಸಾಧನೆಗೆ ಇವರನ್ನು ಸನ್ಮಾನಿಸಿದರು.
ಅವರೊಂದಿಗೆ ಶ್ರೀ ಯೋಗೀಶ್ ಶೆಟ್ಟಿ ಮಾಜಿ ಪಂಚಾಯತ್ ಸದಸ್ಯರು,ಶ್ರೀ ಪ್ರದೀಪ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಇತರರು ಉಸ್ಥಿತರಿದ್ದರು ಹಾಗು ಶುಭ ಹಾರೈಸಿದರು.

