ಮಂಗಳೂರು: ಯುವ ಉದ್ಯಮಿ ನಿತಿನ್ ಕೆ. ಸುವರ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೋಟೆಲ್ ಮತ್ತು ಇತರೆ ಉದ್ಯಮಗಳಲ್ಲಿ ಸಕ್ರಿಯವಾಗಿದ್ದವರು.

ಬಿಜೆಪಿ ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭಾರತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿದ್ದವರು. ರಾಜಕೀಯ ಸಂಬಂಧ ಹೊಂದಿದ್ದ ಪ್ರಭಾವಿ ಯುವ ಉದ್ಯಮಿಯಾಗಿದ್ದಾರೆ.

ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಗ್ಗೆ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಕೇಸ್ ದಾಖಲಿಸಿ ತನಿಖೆ ಪ್ರಾರಂಭವಾಗಿದೆ. ನಿತಿನ್ ಸುವರ್ಣ ಅವರ ಆಪ್ತರು ಮತ್ತು ಮಿತ್ರರು ಶಾಕ್ ಆಗಿದ್ದಾರೆ. ಶೋಕಾಂತರ ವಾತಾವರಣ ಮಂಗಳೂರಿನಲ್ಲಿ ಮನೆಮಾಡಿದೆ.