ಮಂಗಳೂರು: ತುಳುನಾಡಿಗೆ ನಮ್ಮ ಜನಾಕ್ರೋಶ ಯಾತ್ರೆ ಬಂದು ತಲುಪಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ಅಪಮಾನ ಮಾಡುವ ಕಾರ್ಯ ಮಾಡ್ತಾ ಇದ್ದೀರಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ್ನು ಬುಡ ಸಮೇತ ಕಿತ್ತು ಹಾಕಲಿದ್ದೇವೆ. ಲಜ್ಜೆ ಕೆಟ್ಟ ಸರ್ಕಾರ ರಾಜ್ಯದಲ್ಲಿ ಇದೆ. ಒಬ್ಬ ದೇಶ ದ್ರೋಹಿಯನ್ನು ಕೋರ್ಟ್ ಗೆ ತರುವ ವೇಳೆ ಒಬ್ಬ ದೇಶದ್ರೋಹಿ ಬಂದು ಮುತ್ತು ಇಡ್ತಿದ್ದಾನೆ ಎಂದು ಮಂಗಳೂರಿನಲ್ಲಿ ಬಿಜೆಪಿ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು.
ಅದೇ ಯಡಿಯೂರಪ್ಪ ಸರ್ಕಾರದ ಅವದಿಯಲ್ಲಿ ಆಗಿದ್ರೆ ಅಲ್ಲೇ ಆ ದೇಶ ದ್ರೋಹಿಯನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯ ಆಗ್ತಾ ಇತ್ತು. ನಾಲ್ಕು ಶೇ ಮುಸ್ಲಿಮರಿಗೆ ನಿಡ್ತಾ ಇದ್ದಾರೆ. ಯಾಕೆ ಇಲ್ಲಿ ಹಿಂದೂಗಳು ಸತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ರಕ್ಷಣಾ ಭಾಗ್ಯ ಇದೆ ಅಂತೆ. ಇಲ್ಲಿ ಲೌ ಜಿಹಾದ್ ಗೆ ಬಲಿಯಾಗ್ತಾ ಇರೋದು ಹಿಂದೂ ಹೆಣ್ಣು ಮಕ್ಕಳು. ಆದ್ರೆ ರಕ್ಷಣಾ ಮುಸ್ಲಿಮರಿಗೆ ಇದು ಯಾವ ನ್ಯಾಯ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಅಲ್ಲ ಕಾಂಗ್ರೆಸ್ ಮುಖ್ಯಮಂತ್ರಿ. ಯಡಿಯೂರಪ್ಪ ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ನಂ ೧ ಸ್ಥಾನ ಬಂದಿದೆ. ವಾಲ್ಮೀಕಿ ಹಗರಣದಲ್ಲಿ ನೂರು ಕೋಟಿ ವಂಚನೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗೆ ಬಲಿಯಾಗಿದ್ದಾರೆ. ಶಕ್ತಿ ಯೋಜನೆ ಹೆಸರಲ್ಲಿ ಗ್ರಾಮೀಣ ಭಾಗದಲ್ಲಿ ಬಸ್ ನಿಲ್ಲಿಸಿದ್ದಾರೆ.
ಶಾಲೆಗಳಿಗೆ ಮಕ್ಕಳು ಪರದಾಟ ಮಾಡ್ತಾ ಇದ್ದಾರೆ. ಡೀಸೆಲ್ ಪೆಟ್ರೋಲಿಯಂ ಬೆಲೆ ಏರಿಕೆ. ರಾಜ್ಯದಲ್ಲಿ ಬಡವರ ವಿರೋಧಿ ಜನ ವಿರೋಧಿ ರೈತ ವಿರೋಧಿ ಸರ್ಕಾರ. ಮಂಗಳೂರಿಗೆ ಸಿಎಂ ಆಗಿ ಎಷ್ಟು ಬಾರಿ ಭೇಟಿ ನೀಡಿದ್ದೀರಿ. ಎಷ್ಟು ಅನುದಾನ ನೀಡಿದ್ದೀರಿ. ಯಡಿಯೂರಪ್ಪ ಅವದ್ಇಯಲ್ಲಿ ೧೯ ಸಾವಿರ ಕೋಟಿ ಅನುದಾನ ನೀಡಿದೆ. ನೀವು ಯಾಕೆ ಅನುದಾನ ಕೊಡ್ತಾ ಇಲ್ಲ.
ಪುಣ್ಯತ್ಮ ಸ್ಪೀಕರ್ ನಮ್ಮ ಶಾಸಕರನ್ನು ಕಾನೂನು ಬಾಹಿರವಾಗಿ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಗಳು ಕರ್ನಾಟಕದ ಮುಖ್ಯ ಮಂತ್ರಿಯೇ ಬೆಂಗಳೂರಿನ ಮುಖ್ಯಮಂತ್ರಿಯೇ. ಇವರಿಗೆ ಭಯ ಇದೆ ಎಲ್ಲಿ ಬೆಂಗಳೂರು ಬಿಟ್ಟು ಪ್ರವಾಸ ಹೋದ್ರೆ ಡಿಕೆಶಿ ಬಂದು ಕುರ್ಚಿಯಲ್ಲಿ ಕೂರ್ತರೋ ಎಂಬ ಭಯ. ಅದಕ್ಕಾಗಿ ಬಿಟ್ಟು ಹೋಗ್ತಾ ಇಲ್ಲ. ಅಲ್ಲ ರಾಜ್ಯದಲ್ಲಿ ಅಭಿವೃದ್ಧಿ ಇಲ್ಲದೆ ಎಲ್ಲಿ ಹೋದ್ರೆ ತಲೆಗ್ಗಿ ಹೋಗಬೇಕು ಎಂದು ಹೋಗ್ತಾ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತೆ. ಈ ದುಷ್ಟ ಸಿದ್ದರಾಮಯ್ಯ ಕಾಂಗ್ರೆಸ್ ಮಾಡಿದ ಎಲ್ಲಾ ಸಾಲ ಬಿಜೆಪಿ ತೀರಿಸುತ್ತೆ ಎಂದರು.

