ಮಂಗಳೂರು : ಇಂಟರ್‌ನ್ಯಾಷನಲ್ ನಾಚುರೋಪತಿ ದಿನಾಚರಣೆ ರಾಮಕೃಷ್ಣಮಠ, ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ನಡೆಯುವ ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರದಲ್ಲಿ ಇತ್ತೀಚಿಗೆ ಇಂಟರ್‌ನ್ಯಾಷನಲ್ ನಾಚುರೋಪತಿ ದಿನಾಚರಣೆಯನ್ನು ಆಚರಿಸಿತು.
ಮುಖ್ಯ ಅತಿಥಿಯಾಗಿ ಡಾ|| ಅಭಿಜ್ಞಾ ರೈ, ಬಿಎನ್‌ವೈಎಸ್, ಎಂಡಿ, ಪಿಜಿಸಿ ಎಸಿ, ಸಹಾಯಕ ಪ್ರಾಧ್ಯಾಪಕರು ಮತ್ತು ಉಸ್ತುವಾರಿ ನಿಟ್ಟೆ – ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ಸಂಶೋಧನಾ ಕೇಂದ್ರ, ಇವರು ಆಗಮಿಸಿದ್ದು ನಾಚುರೋಪತಿ ಎಂದರೇನು; ಪ್ರಾಚೀನ ಕಾಲದಲ್ಲಿ ಆರೋಗ್ಯಕ್ಕಾಗಿ ಸಹಜ ಪ್ರಕೃತಿ ಚಿಕಿತ್ಸೆಯನ್ನು ಅವಲಂಬಿಸುತ್ತಿದ್ದರು. ಮೊದಲು ಆಯುರ್ವೇದ ಇತ್ಯಾದಿ ಚಿಕಿತ್ಸಾ ಪದ್ಧತಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರೆ, ಈಗ ಆಲೋಪತಿ ಪದ್ದತಿಯ ಮೂಲಕ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಆಲೋಪತಿ ಚಿಕಿತ್ಸಾ ವಿಧಾನದಿಂದ ಆರೋಗ್ಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ರೋಗಿಗೆ ಕಾಯಿಲೆ ಉಲ್ಬಣವಾದಾಗ ನೀಡುವ ಅಗತ್ಯದ ಔಷಧಿ ಯಾ ಅಗತ್ಯದ ಶಸ್ತ್ರ ಚಿಕಿತ್ಸೆಯಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಆರೋಗ್ಯ ಕಾಪಾಡುವಲ್ಲಿ ಆಲೋಪತಿ ಚಿಕಿತ್ಸೆ ಪಾತ್ರ ವಹಿಸುತ್ತದೆ. ಅಗತ್ಯವಿದ್ದಲ್ಲಿ ಆಲೋಪತಿ ಚಿಕಿತ್ಸೆ ಉಪಯುಕ್ತ. ಆದರೆ ಈಗ ಪ್ರತಿಯೊಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಮಾತ್ರಗಳ ಸೇವೆನೆಯಾಗುತ್ತಿರುವುದು ಕಂಡುಬರುತ್ತದೆ. ನಿತ್ಯ ಉಪಯೋಗಿಸಲೇ ಬೇಕಾದ ಶುಂಠಿ, ಮಜ್ಜಿಗೆ ಬೆಳ್ಳುಳ್ಳಿ, ಲಿಂಬೆಹಣ್ಣು, ಜೇನುತುಪ್ಪ (ಪ್ರಾಕೃತಿಕ ಆಹಾರ) ಇತ್ಯಾದಿಗಳಿಂದ ಖಂಡಿತವಾಗಿಯೂ ಆರೋಗ್ಯ ಬರುವುದು.
ಹಿಂದಿನ ಕಾಲದವರ ಪ್ರಾಚೀನ ಸಹಜ ಪ್ರಕೃತಿ ಚಿಕಿತ್ಸೆಯ ಬಗ್ಗೆ ಅರಿವನ್ನು ಇನ್ನು ಹೆಚ್ಚು ಮೂಡಿಸಲು ಈ ಒಂದು ಯೋಗ ಪ್ರಕೃತಿ ಚಿಕಿತ್ಸಾ ತುಂಬಾ ಪ್ರಯೋಜನಕಾರಿಯಾಗಲಿದೆ. ಹೆಚ್ಚಿನ ಆರೋಗ್ಯ ಸಮಸ್ಯೆಯು ನÀಮ್ಮ ಮನಸ್ಸಿನ ದೋಷದಿಂದಲೇ ಉಂಟಾಗುತ್ತದೆ. ನಾವು ನಮ್ಮ ಮನಸ್ಸಿಗೆ ಯಾವಾಗಲೂ ಒಳ್ಳೆಯ ಆಹಾರ ನೀಡಬೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಸಹಜವಾಗಿ ನಮ್ಮ ಆರೋಗ್ಯ ಉತ್ತಮಗೊಳ್ಳುವುದು. ಹಾಗೂ ಇದರೊಂದಿಗೆ ದೇಹಕ್ಕೆ ಸತ್ವಯುತವಾದ ಸಾತ್ವಿಕ ಆಹಾರ ನೀಡಬೇಕು. ರಾಸಾಯನಿಕ ಮಿಶ್ರಣ ಆಹಾರ, ಯಾ ಜಂಕ್‌ಫುಡ್ ಸೇವನೆ ಬೇಡ. ಹಸಿವಾಗದೇ ಊಟ ಮಾಡಬೇಡಿ, ಬಾಯಾರಿಕೆಗೆ ಸಹಜ ಶುದ್ಧ ನೀರನ್ನು ಸೇವಿಸಿ. ಈ ಔಷಧ ರಹಿತ ಚಿಕಿತ್ಸೆ ಜೀವನವನ್ನು ಆರೋಗ್ಯಪೂರ್ಣವಾಗಿ ನಡೆಸಲು ಯಾವ ತೆರನಾಗಿ ಬದಲಾಯಿಸಬೇಕು ಮತ್ತು ಅದರಲ್ಲಿ ಯಾವ ವಿಭಾಗಗಳನ್ನು ಅಳವಡಿಸಲಾಗಿದೆ ಎಂದು ವಿವರವಾಗಿ ತಿಳಿಸಿದರು.

ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಮಾತನಾಡಿ ಯೋಗ ಕೂಡಾ ನಾಚುರೋಪತಿ ಜೊತೆಯಲ್ಲಿ ಸಾಗುತ್ತಿದ್ದು, ಯೋಗದ ಮೂಲಕ ಆರೋಗ್ಯ ಜೀವನ ಮಾರ್ಗವನ್ನು ಜನತೆಗೆ ನಿತಂತರವಾಗಿ ಸದಾ ಶ್ರಮಿಸುತ್ತಿದೆ ಎಂದರು ಕಾರ್ಯಕ್ರಮದಲ್ಲಿ ಡಾ||ನವೀನ್‌ರವರು ಉಪಸ್ಥಿತರಿದ್ದರು. ಚಂದ್ರಹಾಸ್ ಬಾಳ, ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಡಿದರು, ಕಾರ್ತಿಕ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಣೆ ನಡೆಸಿದರು.
ಸುಶೀಲಾ ಕುಮಾರಿ ವಿ. ವಂದನಾರ್ಪಣೆ ಗೈದರು, ನೀನಾ ಪೈ, ಸುಮಾ ಶೆಟ್ಟಿ, ವೀಣಾ ಮಾರ್ಲ, ನೀತಾ ಶೆಟ್ಟಿ, ಭಾರತಿ ರಾವ್ ಕಾರ್ಯಕ್ರಮ ನಡೆಸಲು ಸಹಕಾರ ನೀಡಿದರು.

