ಮಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚಣೆಯ ಹಿನ್ನಲೆಯಲ್ಲಿ ಮಂಗಳೂರಿನ ಹೆರಿಗೆ ಆಸ್ಪತ್ರೆ ಲೆಡಿಗೋಷನ್ ನಲ್ಲಿ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿದೆ.
ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ತುಳುನಾಡ ತುಳುವೆರ್ ಸಂಘಟನೆ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಆರೋಗ್ಯಕರ ತಾಯಿಯಿಂದ ಆರೋಗ್ಯಕರು ಮಗು ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತುಳುನಾಡ ತುಳುವೆರ್ ವತಿಯಿಂದ ನೀಡಲಾದ ಮಕ್ಕಳ ಆರೈಕೆಯ ವಸ್ತುಗಳನ್ನು ಬಾಣಂತಿ ಮಹಿಳೆಯರಿಗೆ ವಿತರಿಸಲಾಗಿದೆ.

ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ತುಳುನಾಡ ತುಳುವೆರ್ ಸಂಘಟನೆಯ ಆಕಾಶ್ ಕರ್ಕೇರ ಹಾಗೂ ಸಂಘಟನೆಯ ಅಧ್ಯಕ್ಷೆ ಸಂಧ್ಯಾ ಅವರನ್ನು ಲೇಡಿಗೋಷನ್ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಧುರ್ಗಾಪ್ರಸಾದ್ ಅವರು ಅಭಿನಂದಿಸಿದ್ದಾರೆ.
ಈ ವೇಳೆ ಯೋಗ ಶಿಕ್ಷಕಿಯೂ ಆಗಿರುವ ಲಿಟ್ಲ್ ಫ್ಲರ್ ಶಾಲೆಯ ಸಂಚಾಲಕಿ ರೇಷ್ಮಾ ಆರ್ ಪೂಜಾರಿ ಅವರನ್ನು ಸನ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದು, ಮಹಿಳೆಯರಿಗೆ ಮಮತಾ ಗಟ್ಟಿ ಅವರು ಶುಭ ಹಾರೈಸಿದ್ದಾರೆ. ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇದರ ನಿರ್ದೇಶಕ ಮುರಳಿ ಹೊಸಮಜಲು ಅವರು ಉಪಸ್ಥಿತರಿದ್ದರು.

