ಮಂಗಳೂರು: ಕೆಟ್ಟು ಕೆರ ಹಿಡಿದ ರಸ್ತೆ ಗುಂಡಿಗೆ ಸ್ಕೂಟರ್ ಬಿದ್ದ ಪರಿಣಾಮ ಹಿಂಬದಿ ಸವಾರೆ ಮಹಿಳೆ ರಸ್ತೆಗೆಸೆಯಲ್ಪಟ್ಟಿದ್ದು ಕಂಟೇನರ್ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಶನಿವಾರ ಸಂಜೆ ನಡೆದಿದೆ.
ಸುರತ್ಕಲ್ ಕುಳಾಯಿ ನಿವಾಸಿ ರೆಹಮತ್ (45) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ. ರೆಹಮತ್ ಅವರ ಪತಿ ರಶೀದ್ ಅವರು ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟಿಕಲ್ ಮೆಂಟೆನೆನ್ಸ್ ಸಿಬ್ಬಂದಿಯಾಗಿದ್ದು ಶನಿವಾರ ಸಂಜೆ ವೇಳೆ ಆಕ್ಟಿವಾ ಸ್ಕೂಟರಲ್ಲಿ ಪತ್ನಿಯನ್ನ ಕುಳ್ಳಿರಿಸಿ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆ ಬರುತ್ತಿದ್ದ ವೇಳೆ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಹದಗೆಟ್ಟ ರಸ್ತೆ ಗುಂಡಿಗೆ ಬಿದ್ದಿದೆ.
ಪರಿಣಾಮ ಸ್ಕೂಟರ್ ಸಹ ಸವಾರ ರಶೀದ್ ಅವರ ಪತ್ನಿ ರೆಹಮತ್ ರಸ್ತೆಗೆಸೆಯಲ್ಪಟ್ಟಿದ್ದು ಆಕೆಯ ಮೇಲೆ ಹಿಂದಿನಿಂದ ಬರುತ್ತಿದ್ದ ಮೆಡಿಕಲ್ ಸರಕಿನ ಕಂಟೇನರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಕಂಟೇನರ್ ನಲ್ಲಿ ಅಳವಡಿಸಿದ ಸಿಸಿಟಿವಿ ಯಲ್ಲಿ ಅಳವಡಿಸಿದ ಚಿತ್ರಣ ಸಿಕ್ಕಿದ್ದು ಪಾಪ ಬಡಪಾಯಿ ಡ್ರೈವರ್ ಧರ್ಮದೇಟು ತಿನ್ನುವಂತಾಯಿತು, ಘಟನಾ ಹಿನ್ನಲೆ ಸ್ಥಳೀಯರು ಕೆಲವು ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು ಹೈ ಡ್ರಾಮಾವೇ ನಡೆದಿತ್ತು, ಯಾರೋ ಮಾಡಿದ ತಪ್ಪಿಗೆ ಕೊನೆಗೆ ಡ್ರೈವರ್ ಪೆಟ್ಟು ತಿನ್ನುವಂತಾಯಿತು.

