ಮಂಗಳೂರು : ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಸ್ಕೂಟರ್ನಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಕಾನಾ ಬಳಿ ನಡೆದಿದೆ.

ಬೈಕ್‌ ನಿಂದ ಬೀಳುವ ದೃಶ್ಯ ಹಿಂದೆ ಇದ್ದ ಬಸ್ಸಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಸ್ಸನ್ನು ನಿಲ್ಲಿಸಿ ಬೈಕ್ ನಿಂದ  ಬಿದ್ದ ಮಹಿಳೆಯನ್ನ ಬಸ್ಸಿನ ಚಾಲಕ ಆಸ್ಪತ್ರೆಗೆ ಸಾಗಿಸಿ ಬಳಿಕ ಬಸ್ ಚಲಾಯಿಸಿದರು. ಮೊಯಿದೆ ಬಸ್ಸಿನ ಚಾಲಕರಾಗಿದ್ದು ಮಾನವೀಯತೆ ಮೆರೆದಿದ್ದಾರೆ.