ಮಂಗಳೂರು: ಸಂಘದ ಪ್ರಾರ್ಥನೆ ಹಾಡಿದ ಡಿಸಿಎಂ‌ ಶಿವಕುಮಾರ್ ನ್ನು ವಜಾ ಮಾಡ್ತೀರಾ?, ಆರ್ ಎಸ್ ಎಸ್ ನಲ್ಲಿದ್ದು ಈಗ ಕಾಂಗ್ರೆಸ್ ನಲ್ಲಿರುವ ನಾಯಕರ ಹೆಸರು ಹೇಳ್ಬೇಕಾ?, ಪ್ರೀಯಾಂಕ ಖರ್ಗೆಗೆ ಉತ್ತರ ಕೊಡೋಕೆ ಒಬ್ಬ ಮುಖ್ಯ ಶಿಕ್ಷಕ್ ಸಾಕು. ಭೂಕಂಪ, ಕೋವಿಡ್, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಆರ್ ಎಸ್ ಎಸ್ ಮಾಡಿದ ಸೇವೆ ಸಾಕಷ್ಟಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ಮುಖಂಡ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ.

ಬಿಕೆ‌‌ ಹರಿಪ್ರಸಾದ್ ಎಷ್ಟೇ ಆರ್ ಎಸ್ ಎಸ್ ವಿರುದ್ಧ‌ ಮಾತಾಡಿದ್ರೂ ಅವರಿಗೆ ಸಚಿವ ಸ್ಥಾನ ಸಿಗಲ್ಲ, ಕರ್ನಾಟಕದಲ್ಲಿ ಸಾವಿರಾರು ಶಾಖೆಗಳು ಇವೆ. ಬ್ಯಾನ್ ಮಾಡಿದ್ರೆ ಏನು ಪರಿಣಾಮ ಅಂತಾ ಸಿಎಂ ಗೊತ್ತಿದೆ. ಕಾಂಗ್ರೆಸ್ ನ ಮನೆಗಳಿಂದಲೇ ನಿತ್ಯ ಶಾಖೆಗೆ ಬರುತ್ತಾರೆ. ಕಾಂಗ್ರೆಸ್ಸಿಗರ ಮನೆಯಲ್ಲಿರುವ ತಾಯಂದಿರೇ ಸಂಘಕ್ಕೆ‌ ಹಣ ಕೊಡುತ್ತಾರೆ ಎಂದು ಮಂಗಳೂರಿನಲ್ಲಿ ಬಿಜೆಪಿ ಮುಖಂಡ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ.