ಮಂಗಳೂರು :  ಏರ್ ಪೋರ್ಟ್ನಲ್ಲಿ ಸಿದ್ದರಾಮಯ್ಯ -ಡಿಕೆಶಿ ಬೆಂಬಲಿಗರ ಶಕ್ತಿ ಪ್ರದರ್ಶನ ವಿಚಾರವಾಗಿ ಮಾತನಾಡಿ, ಮಂಗಳೂರು ಏರ್ ಪೋರ್ಟ್ ನಲ್ಲಾಗಿದ್ದು ಸಣ್ಣ ವಿಚಾರ. ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದರು.

ನಾವು ಗ್ಯಾರಂಟಿ ಭಾಗ್ಯಗಳನ್ನ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಆದರೆ ಬಿಹಾರದಲ್ಲಿ ಚುನಾವಣೆ ಪೂರ್ವದಲ್ಲೇ ಹಣ ಹಂಚಲಾಗಿದೆ. ಚುನಾವಣಾ ಆಯೋಗಕ್ಕೆ ಮೊದಲು ಚೀಫ್ ಜಸ್ಟಿಸ್ ಇದ್ರು, ಚುನಾವಣಾ ವ್ಯವಸ್ಥೆ ದುರ್ಬಲ ಮಾಡಲು ಜಸ್ಟಿಸ್ ರನ್ನ ತೆಗೆದರು.

ನಾವು ಅನ್ನಭಾಗ್ಯ ಯೋಜನೆಯನ್ನ ದೇಶದಲ್ಲೇ ಪ್ರಥಮ ಬಾರಿ ಕೊಟ್ಟಾಗ ಬಿಟ್ಟಿ ಭಾಗ್ಯ ಎಂದು ಪ್ರಚಾರ ಮಾಡಿದ್ರು, ಜನರನ್ನ ಸೋಮಾರಿ ಮಾಡುವ ಕಾರ್ಯಕ್ರಮ ಎಂದು ಹೇಳ್ತಾ ಇದ್ರು, ಈಗ ಇವರು ಮಾಡಿದ್ದೇನು? ಎಂದು ಮಾಜಿ ಸಚಿವ ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.