ಮಂಗಳೂರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಮುಲ್ಕಿ ಮೂಡಬಿದ್ರೆಯಲ್ಲಿ 68 ಫಾರಂ-7 ದುರುಪಯೋಗ ಆಗಿದ್ದು ನಾಲ್ಕಕ್ಕಿಂತ ಹೆಚ್ಚು ಮಂದಿಯ ಮೇಲೆ ನ್ಯಾಯಾಲಯದ ಸೂಚನೆ ಮೇರೆಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕಾವೂರು ಠಾಣೆಯಲ್ಲಿ ಎರಡು ಮತ್ತು ಬೆಳ್ತಂಗಡಿಯಲ್ಲಿ ಒಂದು ಕೇಸ್ ದಾಖಲಾಗಿದೆ. ಮ್ಯಾಪಿಂಗ್ ನಲ್ಲಿ, ಕರಡು ಪಟ್ಟಿಯಲ್ಲಿ ಹೆಸರಿದ್ದರೇ ಈ ಬಗ್ಗೆ ನ್ಯಾಯಾಲಯದ ಮೂಲಕ ದೂರು ದಾಖಲಿಸಿದ್ದಾರೆ. ಕಿಶನ್ ಎಂಬವನ ಹೆಸರಲ್ಲಿ 45, ನಿತೇಶ್ 9, ಯುವರಾಜ್ 10, ಶಶಿಕಲಾ ಎಂಬವರ ಹೆಸರಲ್ಲಿ ನಾಲ್ಕು ಫಾರಂ-7 ಸಲ್ಲಿಸಲಾಗಿದೆ.
ಇದರಲ್ಲಿ ಒಂದೇ ಪೆನ್ ಮತ್ತು ಕೈಬರಹ ಬಳಕೆಯಾಗಿದೆ. ಇದು ನೇರವಾಗಿ ಮತದಾರನ ಹಕ್ಕನ್ನು ದುರ್ಬಳಕೆ ಮಾಡುವುದಲ್ಲದೆ, ಸರ್ಕಾರದ ಎಲ್ಲಾ ಸವಲತ್ತು ಕಸಿಯುವ ಪ್ರಯತ್ನವಾಗಿದ್ದು ಇದಕ್ಕಿಂತ ದೊಡ್ಡ ದೇಶದ್ರೋಹ ಇನ್ನೇನಿದೆ? ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇದು ಆ ಕ್ಷೇತ್ರದ ಶಾಸಕನಿಗೆ ಗೊತ್ತಿಲ್ಲದೆ ಆಗಿದ್ದಾ ಎಂದು ಪ್ರಶ್ನಿಸಿದರು.
ಇಂಥ ಪ್ರಕರಣಗಳು ಬಿಎಲ್ ಎಗಳಿಗೆ ಮೊದಲು ಗೊತ್ತಾಗುವುದಿಲ್ಲ, ಆದರೆ ನಂತರ ಅವರಿಂದಲೇ ಗೊತ್ತಾದ ಬಳಿಕ ಸೂಕ್ಷ್ಮವಾಗಿ ಪರಿಶೀಲಿನೆ ನಡೆಸಿ ಯಾರ ವಿರುದ್ಧ ಫಾರಂ 7 ಸಲ್ಲಿಕೆ ಆಗಿದೆಯೋ ಅವರಿಂದಲೇ ದೂರು ದಾಖಲಿಸಿದ್ದೇವೆಂದು, ಕಾಂಗ್ರೆಸ್ ನವರು ಈಗ ಎಚ್ಚೆತ್ತುಕೊಂಡಿದ್ದಾರೆ, ಅವರ ಬಿಎಲ್ ಎಗಳು ಕೆಲಸವೇ ಮಾಡಿಲ್ಲ ಎನ್ನುವ ಪ್ರಕಾಶ್ ರಾಜ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಮಿಥುನ್ ರೈ ಪ್ರತಿಕ್ರಿಯಿಸಿದರು.

