ಮಂಗಳೂರು: ರಾಹುಲ್ ಗಾಂಧಿ ವಂಶ ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಶಾಸಕ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿಯ ಕಿರುಬೆರಳಿಗೂ ಸಮ ಇಲ್ಲ. ಇಂತಹ ಜನಪ್ರತಿನಿದಿಗಳ ಹೇಳಿಕೆ ಕರಾವಳಿಗೆ ಕಪ್ಪು ಚುಕ್ಕೆ. ಕರಾವಳಿಯ ಜನಪ್ರತಿನಿಧಿಗಳಿಗೆ ವಿಶೇಷ ಗೌರವವಿದೆ. ನಾವು ಬೇರೆ ಜಿಲ್ಲೆಯವರಂತೆ ಅಲ್ಲ. ಈ ಹೇಳಿಕೆಯನ್ನು ಯಾರು ಕೂಡ ಒಪ್ಪುವುದಿಲ್ಲ. ಸ್ವತಃ ಅವರ ಮನೆಯವರೂ ಒಪ್ಪುವುದಿಲ್ಲ. ಉತ್ತರ ಭಾರತದಲ್ಲಿ ಶಾಂತಿ ಉಳಿಯಲಿ ಎಂದು ಇಂದಿರಾ ಗಾಂಧಿ ರಕ್ತ ಇದೆ ಎಂದರು.
ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲು ರಾಜೀವ್ ಗಾಂಧಿ ರಕ್ತ ಬಿದ್ದಿದೆ. ಇವರದ್ದು ತಾಲಿಬಾನ್ ಡಿ ಎನ್ ಎ ಇರಬೇಕು. ಅವರ ಅಸ್ತಿತ್ವ ಉಳಿಸಲು ಈ ರೀತಿ ಹೇಳಿಕೆ ನೀಡುತ್ತಾರೆ. ಕರಾವಳಿಯವರಿಗೆ ವಿಶೇಷ ಗೌರವ ಇದೆ. ಮಂಗಳೂರಿನವರು ಬಾರಿ ಉಷಾರ್ ಎಂದು ಗೌರವ ಇದೆ ಎಂದರು.

