ಮಂಗಳೂರು:  ಶ್ರೀ ರಕ್ತೇಶ್ವರೀ ಮತ್ತು ಪಂಚದೇವತಾ ಸಾನಿಧ್ಯ ಶ್ರೀ ರಾಮನಗರ ವಾಮಂಜೂರು ಇದರ ವತಿಯಿಂದ ವಾಮಂಜೂರು ಕೇಂದ್ರ ಮೈದಾನದಲ್ಲಿ ಅ.9‌ರಿಂದ 13 ರವರೆಗೆ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವ ನಡೆಯಲಿದೆ.ಅ.9‌ರ‌ ಬೆಳಿಗ್ಗೆ 9 ಗಂಟೆಗೆ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು ಶಾರದಾ ಮಹೋತ್ಸವವನ್ನ ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್.ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ.ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಂದ ಗೋಪೂಜೆ ನಡೆಯಲಿದೆ.

ಶ್ರೀ ರಕ್ತೇಶ್ವರೀ ಮತ್ತು ಪಂಚದೇವತಾ ಸಾನಿಧ್ಯ ಶ್ರೀ ರಾಮನಗರ ವಾಮಂಜೂರು ಇದರ ವತಿಯಿಂದ ವಾಮಂಜೂರು ಕೇಂದ್ರ ಮೈದಾನದಲ್ಲಿ ಅ.9‌ರಿಂದ 13 ರವರೆಗೆ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವ ನಡೆಯಲಿದೆ.ಅ.9‌ರ‌ ಬೆಳಿಗ್ಗೆ 9 ಗಂಟೆಗೆ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು ಶಾರದಾ ಮಹೋತ್ಸವವನ್ನ ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್.ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ.ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಂದ ಗೋಪೂಜೆ ನಡೆಯಲಿದೆ.

ಐದು‌ ದಿನಗಳ‌ ಕಾಲ‌ ಗೋಪೂಜೆ,ಶಾರದಾ ಮಾತೆಗೆ ವಿಶೇಷ ಪೂಜೆ,ವಿವಿಧ ಮಂಡಳಿಗಳಿಂದ ಭಜನೆ, ಧಾರ್ಮಿಕ ಸಭೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ಪ್ರಸಾದ ರೂಪವಾಗಿ‌ ಅನ್ನಸಂತರ್ಪಣೆ ನಡೆಯಲಿದೆ.ಅ.12‌ರಂದು ಬೆಳಗ್ಗೆ 8 ರಿಂದ ಅಕ್ಷರಾಭ್ಯಾಸ,ಬೆಳಿಗ್ಗೆ 10 ಗಂಟೆಗೆ ದುರ್ಗಾ ಹೋಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅ.9 ರಂದು ರಾತ್ರಿ 7.45‌ರಿಂದ ಪೊಳಲಿ ಅಡ್ಡೂರಿನ ಸಿಂಚನ‌ ಮತ್ತು ತಂಡದಿಂದ ಭಕ್ತಿಭಾವ ಸಂಗಮ,ಅ.10‌ರ‌ ರಾತ್ರಿ 7.45 ರಿಂದ ವಾಮಂಜೂರಿನ ಅಂಕಿತ ಅಮೀನ್ ಮತ್ತು ಬಳಗದಿಂದ ಭರತನಾಟ್ಯಂ,ರಾತ್ರಿ‌8.45 ರಿಂದ ರ್ಯಾಪ್ ಟ್ರ್ಯಾಕ್ ಮೆಲೋಡಿಸ್ ಕುಡ್ಲ ಇವರಿಂದ ಸಂಗೀತ ರಸ ಸಂಜೆ ನಡೆಯಲಿದೆ.

ಅ.11ರಂದು ರಾತ್ರಿ‌ 7.45‌ಕ್ಕೆ ವಿದುಷಿ ರಕ್ಷಿತಾ ಎಲ್‌ ಭಟ್ ತಂಡದಿಂದ ಶ್ರೀ ದೇವಿ ತುಳಸಿ ಪಾರಮ್ಯ‌ ಪೌರಾಣಿಕ ಗೀತಾ ರೂಪಕ,ರಾತ್ರಿ 8.45 ರಿಂದ ಕದ್ರಿಯ ನೃತ್ಯ ಭಾರತಿ‌ ಸಂಸ್ಥೆಯಿಂದ ನೃತ್ಯ ಉಲ್ಲಾಸ‌ ನಡೆಯಲಿದೆ.ಅ.12 ರ ರಾತ್ರಿ‌8.45 ರಿಂದ ವಾಮಂಜೂರು ಫ್ರೆಂಡ್ಸ್ ವಾಮಂಜೂರು ಹುಲಿ ಪ್ರಯೋಜಿಸುವ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಇವರಿಂದ ದೈವರಾಜೆ ಶ್ರೀ ಬಬ್ಬುಸ್ವಾಮಿ ಭಕ್ತಿ ಪ್ರಧಾನ ತುಳು‌ ನಾಟಕ ಪ್ರದರ್ಶನಗೊಳ್ಳಲಿದೆ. ಅ.13‌ರಂದು ಸಂಜೆ 6 ರಿಂದ ನೃತ್ಯ ಶಿವಂ ಡ್ಯಾನ್ಸ್ ಸ್ಟುಡಿಯೋ ವಾವಂಜೂರು ಇವರಿಂದ ನೃತ್ಯ ವೈಭವ ನಡೆಯಲಿದೆ.ಬಳಿಕ ಸಂಜೆ 6 .30ಕ್ಕೆ ಉತ್ಸವ ಮಂಟಪದಿಂದ ವಿವಿಧ ವಾದ್ಯಗೋಷ್ಟಿ,ಆಕರ್ಷಕ ಟ್ಯಾಬ್ಲೋಗಳು,ಭಜನೆಯೊಂದಿಗೆ ಶ್ರೀ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ಹೊರಟು ವಾಮಂಜೂರಿನ ಮಂಗಳ ಜ್ಯೋತಿವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಬಂದು ಗುರುಪುರ ಫಲ್ಗುಣಿ ನದಿಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ಮಾಡಲಾಗುವುದು ಎಂದು ಶಾರದಾ ಮಹೋತ್ಸವದ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರತಿಕಾ ಪ್ರಕಟನೆಯಲ್ಲಿ ತಿಳಿದಿದ್ದಾರೆ.