ಮಂಗಳೂರು: ವಿಕೆ ಫರ್ನಿಚರ್ಸ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನ ಇದರ ವಿ.ಕೆ ಉತ್ಸವದ ಸಮಾರೋಪ ಸಮಾರಂಭವು ಮಂಗಳೂರಿನ ಯೆಯ್ಯಡಿಯ ವಿ.ಕೆ ಫರ್ನಿಚರ್ಸ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಶೋರುಂ ನಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಮಾಜಿ ಸದಸ್ಯರಾದ ಕೆ.ಟಿ ಸುವರ್ಣ, ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಕೆ. ಚಂದ್ರಹಾಸ ಅಡ್ಯಂತಾಯ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಬಾರಿಯ ವಿಕೆ ಉತ್ಸವವನ್ನು ವಿಭಿನ್ನ ಮತ್ತು ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ದೇಶ ಸೇವೆ ಮಾಡಿದ ನಿವೃತ್ತ ಯೋಧ ಅಪ್ಪು ಶೆಟ್ಟಿ, ವೈಟ್ ಡೌಸ್ ಸಂಸ್ಥೆಯ ಮುಖ್ಯಸ್ಥೆ ಕೊರಿನ್ಹಾ ರಸ್ಕಿನ್ಹಾ, ವಿಕಲಾಂಗತೆ ಮೆಟ್ಟಿನಿಂತು ಸಾಧನೆಗೈದ ಮಾಸ್ಟರ್ ಕೌಶಿಕ್ ಆಚಾರ್ಯ, ಮಾಸ್ಟರ್ ಮಹಮ್ಮದ್ ಅಯಾನ್, ಅವರಿಗೆ ಗಣ್ಯರಿಂದ ವಿಕೆ ಉತ್ಸವದಲ್ಲಿ ಗೌರವದ ಸನ್ಮಾನಿಸಿ ಶುಭಹಾರೈಕೆ ಪಡೆದರು.

ವಿ.ಕೆ ಉತ್ಸವದ ಪ್ರಯುಕ್ತ ಗ್ರಾಹಕರ ಅದೃಷ್ಟದ ಡ್ರಾ ನೆರವೇರಿಸಲಾಯಿತು. ಈ ಡ್ರಾ ದಲ್ಲಿ ಮೊದಲ ಬಂಪರ್ ಬಹುಮಾನ ಗ್ರಾಂಡ್ ವಿಥಾರ ಕಾರ್ ಕೂಪನ್ ನಂಬರ್ ೧೬೦೫ ಕೊಲ್ಯ ನಿವಾಸಿ ಸುಮ ಅವರಿಗೆ ಲಭಿಸಿತು. ಟೂ ವಿಲರ್ ಸುಜುಕಿ ಅವೆನಿಸ್ ಸ್ಕೂಟರ್ ಇಬ್ಬರು ಗ್ರಾಹಕರಿಗೆ ಬಂಪರ್ ಆಗಿ ಲಭಿಸಿತು ಕೂಪನ್ ನಂಬರ್ ೧೭೪೦೪ ಕೇಶವ್ ಮತ್ತು ೦೦೩೧೦೩ ಕೊಟ್ಟಾರ ನಿವಾಸಿ ರಾಜೇಯ್ ಎಂಆರ್, ಇನ್ನೂ ಬೆಡ್ರೂಂ ಸೆಟ್ ಕೂಪನ್ ನಂಬರ್ ೦೩೫೮೭ ಕಾಟಿಪಳ್ಳ ನಿವಾಸಿ ಅನೀಶ ಬಾನು ಅವರಿಗೆ ಸಿಕ್ಕಿತು.
ಗೋಲ್ಡ್ ನೆಕ್ಲೆಸ್ ಕೂಪನ್ ನಂಬರ್ ೦೧೩೮೧೦ ಅಶೋಕನಗರದ ಸುಕೇಶ್ ಮೆನನ್ ಅವರಿಗೂ ಅತ್ಯಾಕರ್ಷಕ ಉಡುಗೊರೆ ಐದು ಗೋಲ್ಡ್ ರಿಂಗ್ ರಾಜಶೇಖರ್ ಚೌಟ, ಲಿಲ್ಲಿ ಲೋಬೊ, ಅಶೇರ್ ಲೋಬೊ, ದಿಶಾ ಎಸ್ ಎನ್, ಶಾಹಿಸ್ತಾ, ಅವರಿಗೆ ಲಭಿಸಿದೆ, ಇನ್ನೂ ಅದೃಷ್ಟದ ವ್ಯಾನಿಶ್ ಎಲ್ ಕಾರ್ನರ್ ಸೋಫ ಸಂದೀಪ್ ಅವರಿಗೆ, ಡೈನಿಂಗ್ ಸೆಟ್ ಅಝ್ಮಿಯ, ಡಬಲ್ ಡೋರ್ ರೆಫ್ರಿಜರೇಟರ್ ವೆನಿಶಾ ಅವರಿಗೂ ೪೩ ಇಂಚ್ ಟಿ ವಿ ರಾಜೇಶ್ ಮೊಂತೇರೊ ಅವರಿಗೆ ಅದೃಷ್ಟ ಡ್ರಾದಲ್ಲಿ ಬಂದಿದೆ. ಕಾರ್ಯಕ್ರಮದಲ್ಲಿ ವಿ.ಕೆ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ವಿಠ್ಠಲ್ ಕುಲಾಲ್, ವಿನೂತನ ವಿಠ್ಠಲ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

