ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಬೃಹತ್ ಆಂದೋಲನ ದೇಶಾದ್ಯಂತ ವಿ ಎಚ್ ಪಿ ಆರಂಭಿಸಲಿದೆ. ರಾಮಜನ್ಮಭೂಮಿ ಮಾದರಿಯಲ್ಲೇ ಮಂದಿರ ಮುಕ್ತಿ ಜನಾಂದೋಲನ ರೂಪಿಸಲು ಯಶಸ್ವಿಗೊಳಿಸಲು ನಿರ್ಧಾರಿಸಲಾಗಿದೆ ಎಂದರು.

ದೇಶಾದ್ಯಂತ ಇರುವ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಆಧೀನ ಹಾಗೂ ನಿಯಂತ್ರಣದಲ್ಲಿರಿಸಿದೆ. ಮಂದಿರದಗಳನ್ನು ಸರಕಾರಗಳ ನಿಯಂತ್ರಣ ದಿಂದ ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ ಯೋಜನೆ ರೂಪಿಸಿದೆ. ವಿಎಚ್‌ಪಿ ಸಂಘಟನಾತ್ಮಕ ವಿಭಾಗಗಳ ಭೇಟಿ ಹಾಗೂ ಸಂತರಿಂದ ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಸರ್ಕಾರಗಳು ಮಸೀದಿ, ಚರ್ಚ್, ಗುರುದ್ವಾರ ಅಥವಾ ಬೌದ್ಧ ಜೈನ ಮಂದಿರಗಳ ಆಡಳಿತವನ್ನು ನಡೆಸುವುದಿಲ್ಲ. ಹಾಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಮಾತ್ರ ಏಕೆ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು?. ದೇವಸ್ಥಾನಗಳ ಆದಾಯದ ದುರ್ಬಳಕೆ ಆಗುತ್ತಿದ. ಕುಕ್ಕೆ ಸುಬ್ರಹ್ಮಣ್ಯದಂತಹ ಪ್ರಸಿದ್ಧ ದೇವಸ್ಥಾನಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಅತ್ಯಂತ ಶ್ರೀಂಮತ ದೇವಸ್ಥಾನ. ದೇಶದ ವಿವಿಧ ಭಾಗಗಳ ದೇವಸ್ಥಾನಗಳಿಂದ ಸರ್ಕಾರಗಳು ಪಡೆಯುತ್ತಿರುವ ಆದಾಯವನ್ನು ಲೆಕ್ಕಹಾಕಿ.

ದೇವಸ್ಥಾನಗಳು ಸ್ವತಂತ್ರಗೊಂಡರೆ ವರ್ಷಕ್ಕೆ ಕನಿಷ್ಠ 1 ಸಾವಿರ ಕೋಟಿಗೂ ಹೆಚ್ಚು ಹಣ ಹಿಂದೂ ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಬಹುದು. ಧಾರ್ಮಿಕ ಚಟುವಟಿಕೆಗಳಿಗೆ ನಡೆಸಬಹುದಾಗಿದೆ. ದೇವಸ್ಥಾನಗಳ ಆದಾಯದಿಂದ ಆಡಳಿತದ ಹೆಸರಿನಲ್ಲಿ ಐಎಎಸ್ ಆಫೀಸರ್‌ಗಳು ಹಾಗೂ ಸಿಇಒ ಗಳಿಗೆ ಸಂಬಳ ನೀಡಲಾಗುತ್ತಿದೆ. ಅವರ ಭಾರಿ ವೇತನ ಮತ್ತು ಆಡಿಟ್ ವೆಚ್ಚಗಳನ್ನು ಭಕ್ತರ ಕಾಣಿಕೆ ಹಣದಿಂದಲೇ ಪಾವತಿಸಲಾಗುತ್ತಿದೆ.

ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಇದನ್ನು ವಿಎಚ್‌ಪಿ ತೀವ್ರವಾಗಿ ಖಂಡಿಸುತ್ತದೆ. 2026 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಗವರ್ನರ್‌ಗಳು, ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿಗಳು ಸಮ್ಮತಿಸದಿದ್ದಲ್ಲಿ ಬೃಹತ್ ಮಟ್ಟದ ಸಾರ್ವಜನಿಕ ಆಂದೋಲನ. ಮೆಟ್ರೋ ನಗರಗಳಲ್ಲಿ ಹಿರಿಯ ನಾಗರಿಕರ ಮತ್ತು ಗಣ್ಯರ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು.