ಮಂಗಳೂರು: ಮಂಗಳೂರು ಕಾರಾಗೃಹದ 45 ವಿಚಾರಣಾಧೀನ ಕೈದಿಗಳಿಗೆ ಮಧ್ಯಾಹ್ನ ಊಟದ ಬಳಿಕ ಏಕಾಏಕಿ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದೆ.
ಅಸ್ವಸ್ಥಗೊಂಡ ಕೈದಿಗಳಿಗೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪರಿಶೀಲನೆ ನಡೆಸಿದ್ದಾರೆ.

ಕೈದಿಗಳಿಗೆ ಮುಂಜಾನೆ ಅವಲಕ್ಕಿ , ಮದ್ಯಾಹ್ನ ಅನ್ನ ದಾಲ್ ಸಾಂಬರ್ ನೀಡಲಾಗಿದೆ. ಮಧ್ಯಾಹ್ನ ಕೆಲವು ಕೈದಿಗಳಿಗೆ ಹೊಟ್ಟೆ ನೋವು ಕಾಣಿಸಿ ಕೊಂಡಿದೆ. 45 ಕೈದಿಗಳಿಗೆ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಕೈದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಾಗೃಹದಲ್ಲಿ 350 ಕೈದಿಗಳಿದ್ದಾರೆ. ಎಲ್ಲರೂ ಅದೇ ಆಹಾರ ಸೇವಿಸಿದ್ದಾರೆ.
ಕಾರಾಗೃಹಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಸ್ಯಾಂಪಲ್ ಗಳನ್ನು ಪಡೆದು ಕೊಳ್ಳಲಾಗಿದ್ದು ಪರೀಕ್ಷೆಗೆ ಕಳುಹಿಸಲಾಗುವುದು. ಘಟನೆಯ ಬಗ್ಗೆ ತನಿಖೆ ಗೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.
ಕಾರಾಗೃಹಕ್ಕೆ ಆರೋಗ್ಯ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯಾಹ್ನ ಊಟದ ಸ್ಯಾಂಪಲ್ ನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಲಕ್ಟ್ ಮಾಡಿದ್ದಾರೆ.

