ಮಂಗಳೂರು: ಉಳ್ಳಾಲದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಅಪಸ್ವರ ಎದ್ದಿದ್ದು, ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೂರನೇ ಆರೋಪಿಯ ಫಿಕ್ಸ್ ಮಾಡಿದ್ರಾ ಪೊಲೀಸರು ? ಎಂಬ ಅನುಮಾನ ಉಟ್ಟಿಕೊಂಡಿದೆ. ಮೂರನೇ ಆರೋಪಿ ಮನೀಶ್ ಅಂದು ಮಂಗಳೂರು ಬಿಟ್ಟು ಹೊರಗೆ ಹೋಗಿಯೇ ಇಲ್ಲ. ಅಂದು ಮಂಗಳೂರು ನಗರದ ಲಾಲ್ ಬಾಗ್ ನಲ್ಲಿರುವ ಬಾರ್ ನಲ್ಲಿದ್ದ ಸಿಸಿಟಿವಿ ದೃಶ್ಯ ಪತ್ತೆಯಾಗಿದೆ ಎಂದು ಮೂರನೇ ಆರೋಪಿ ಮನೀಶ್ ಪರ ವಕೀಲ ವಿಕ್ರಮ್ ರಾಜ್ ಹೇಳಿಕೆ ನೀಡಿದ್ದಾರೆ.
ರಾತ್ರಿ ಹತ್ತರಿಂದ 12 ಗಂಟೆ ವರೆಗೂ ಬಾರ್ ನಲ್ಲಿ ಇದ್ದು ಉಳ್ಳಾಲಕ್ಕೆ ಹೋಗಿರಲಿಲ್ಲ . ತನಗೂ, ಆ ರೇಪ್ ಪ್ರಕರಣಕ್ಕೂ ಸಂಬಂಧ ಇಲ್ಲವೆಂದು ಹೇಳಿದ್ದರೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಕಾರಿನಲ್ಲಿ ಯುವತಿ ಜೊತೆಗಿದ್ದರೆಂದು ಪೊಲೀಸರು ಹೇಳಿದ್ದರು. ಉಳ್ಳಾಲದ ರಾಣಿಪುರಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾಗಿ ಹೇಳಿದ್ದರು. ಮನೀಶ್ ಮಂಗಳೂರಿನಲ್ಲಿ ಇದ್ದ ಬಗ್ಗೆ ಸಾಕ್ಷ್ಯಗಳಿದ್ದು ಯಾವುದೇ ಕಾರಿನಲ್ಲಿ ಹೋಗಿರಲಿಲ್ಲ.

ಮನೀಶ್ ಓಡಾಡಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಕೋರ್ಟಿಗೆ ಮನವಿ ಸಲ್ಲಿಸಿದ್ದೇವೆ. ಪೊಲೀಸ್ ಕಮಿಷನರ್ ಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಕೋರ್ಟಿನಲ್ಲಿ ಕೇಳಿಕೊಂಡಿದ್ದೇವೆ. ಪೊಲೀಸರು ಮನೀಶ್ ನನ್ನು ರೇಪ್ ಪ್ರಕರಣದಲ್ಲಿ ಫಿಕ್ಸ್ ಮಾಡಿ ಆತನ ಭವಿಷ್ಯ ಹಾಳು ಮಾಡಿದ್ದಾರೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ಕ್ರಿಮಿನಲ್ ಮಾಡಿದ್ದಾರೆ ಎಂದು ಮಂಗಳೂರು ಕೋರ್ಟ್ ಮುಂದೆ ವಕೀಲ ವಿಕ್ರಮ್ ರಾಜ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

