ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಾಗಿಸುತ್ತಿದ್ದ ಸಹೋದರರಿಬ್ಬರನ್ನು ಬಂಧಿಸಲಾಗಿದೆ. ಬಂಟ್ವಾಳದ ಮಂಚಿ ಗ್ರಾಮದ ಪಂಜಾಲಕ್ರಾಸ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಮೊಹಮ್ಮದ್ ನಿಜಾಮುದ್ದೀನ್ (30),ಮೊಹಮ್ಮದ್ ಶಾಹೀಂ (19) ಬಂಧಿತ ಆರೋಪಿಗಳು. 42.30 ಲಕ್ಷ ಮೌಲ್ಯದ 423 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಒಟ್ಟು 46.25 ಲಕ್ಷದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೊಲೆರೋ ವಾಹನದಲ್ಲಿ ಆರೋಪಿಗಳು ಮಾದಕದ್ರವ್ಯ ಸಾಗಣೆ ಮಾಡುತ್ತಿದ್ದರು. 3 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೈಜೀರಿಯಾ ಮೂಲದ ವ್ಯಕ್ತಿಯಿಂದ ಮಾದಕ ದ್ರವ್ಯ
ಖರೀದಿಸಿದ್ದರು. ಮಾರಾಟ ಉದ್ದೇಶದಿಂದ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

