ಮಂಗಳೂರು : ಸುಳ್ಯ ಶಾಸಕಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಪೋಸ್ಟ್ ವಿಚಾರವಾಗಿ ಶಾಸಕ ವೇದವ್ಯಾಸ್ ಕಾಮತ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಮಾಡಿದವನನ್ನ ಬಂಧಿಸಲು ಆಗ್ರಹಿಸಿ ಮಂಗಳೂರಿನಲ್ಲಿ ನಾಳೆ ಪ್ರತಿಭಟನೆ ನಡೆಯಲಿದೆ. ವಿಕೃತಿಯ ಮನಸಿನ ವ್ಯಕ್ತಿ ಅವರಿಗೆ ಅವಮಾನ ಮಾಡಿದ್ದಾನೆ. ಪರಿಶಿಷ್ಟ ಜಾತಿಗೆ ಸೇರಿದ ಒಂದು ಮಹಿಳೆಗೆ ಈ ರೀತಿ ಮಾಡಿರುವುದು ಸಮಾಜ ಒಪ್ಪುವುದಿಲ್ಲ.
ಕಾಂಗ್ರೆಸ್ ನಾಯಕರ ಸಂವಿಧಾನಕ್ಕೆ ಗೌರವ ಕೊಡುತೇವೆ ಎನ್ನುತ್ತಾರೆ. ಇವತ್ತು ಸಂವಿಧಾನದ ಅಡಿಯಲ್ಲಿ ಜನ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದರೆ ಕಾಂಗ್ರೆಸ್ ಇನ್ನು ಕಂಡಿಸಿಲ್ಲ. ಕಾಂಗ್ರೆಸ್ ಯಾವ ರೀತಿಯಲ್ಲೂ ಕ್ರಮ ವಹಿಸಲ್ಲ ಎಂಬುವುದು ನಾಚಿಗೆಯಾಗುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

