ಮಂಗಳೂರು: ಅಓರ್ಟಿಕ್ ಸ್ಟಿನೋಸಿಸ್ ಎಂಬುದು ಹೃದಯದ ಅಓರ್ಟಿಕ್ ಕವಾಟವು ಸಂಕುಚಿತಗೊಳ್ಳುವ ಗಂಭೀರ ಕಾಯಿಲೆಯಾಗಿದ್ದು, ಇದು ತೀವ್ರ ಹೃದಯ ಸಂಬಂಧಿತ ತೊಂದರೆಗಳಿಗೆ ಕಾರಣವಾಗಬಹುದು. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅಓರ್ಟಿಕ್ ಕವಾಟದ ಕಾಯಿಲೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹೃದಯ ಕವಾಟದ ರೋಗಗಳಲ್ಲಿ ಒಂದು. ಇದುವರೆಗೆ ಚಿಕಿತ್ಸೆಗಾಗಿ ಶಸ್ತçಚಿಕಿತ್ಸೆಯ ಮೂಲಕ ಕವಾಟ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ವಯಸ್ಸಾದ ರೋಗಿಗಳಿಗೆ ಈ ಶಸ್ತ್ರ ಚಿಕಿತ್ಸೆ ಬಹಳ ಅಪಾಯಕಾರಿಯಾಗಿರುತ್ತದೆ.
75 ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಸ್ಟ್ರೋಕ್, ಸಂಪೂರ್ಣ ಹೃದಯ ಬ್ಲಾಕ್, ರಕ್ತಸ್ರಾವ ಸಮಸ್ಯೆಗಳು, ನಿಧಾನ ಚೇತರಿಕೆ ಮುಂತಾದ ಜಟಿಲತೆಗಳು ಹೆಚ್ಚಾಗುತ್ತವೆ. ಜೊತೆಗೆ, COPD, ಹಳೆಯ ಸ್ಟ್ರೋಕ್, ದೀರ್ಘಕಾಲದ ಕಾಯಿಲೆ, ಕ್ಯಾನ್ಸರ್ ಮುಂತಾದ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಶಸ್ತ್ರ ಚಿಕಿತ್ಸೆ ಸಾಧ್ಯವಾಗುವುದಿಲ್ಲ.
ಈ ಸವಾಲುಗಳನ್ನು ನಿವಾರಿಸಲು 2002ರಲ್ಲಿ ಕಡಿಮೆ ಪರಿಣಾಮಕಾರಿ ವಿಧಾನವಾದ ಟ್ರಾನ್ಸ್ಕಾಥೆಟರ್ ಅಓರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್ ಪರಿಚಯಿಸಲಾಯಿತು. ಆರಂಭದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಮಾತ್ರ ಬಳಸಲಾಗುತ್ತಿದ್ದ ಈ ತಂತ್ರಜ್ಞಾನಕ್ಕೆ 2012ರಲ್ಲಿ ಅಮೇರಿಕಾದ FDA ಅನುಮೋದನೆ ನೀಡಿತು. ಭಾರತದಲ್ಲಿ ಇದು 2016–17ರಲ್ಲಿ ಲಭ್ಯವಾಯಿತು. ಈಗ ಜಗತ್ತಿನಲ್ಲಿ ಹೃದಯ ಕವಾಟ ಬದಲಾವಣೆಗೆ ಈ ಚಿಕಿತ್ಸಾ ವಿಧಾನವನ್ನು ಹೆಚ್ಚಾಗಿ ಅನುಸರಿಸುತ್ತಾರೆ.
ಇತ್ತೀಚಿನ ಅಧ್ಯಯನಗಳಲ್ಲಿ, TAVR ತಂತ್ರವು ಕೇವಲ ಅಪಾಯ ಹೆಚ್ಚು ಇರುವವರಿಗೆ ಮಾತ್ರವಲ್ಲದೆ, ಕಡಿಮೆ ಅಪಾಯದವರಲ್ಲಿಯೂ ಪರಿಣಾಮಕಾರಿಯಾಗಿದೆ ಮತ್ತು ಕೆಲ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ ಎಂಬುದು ಸಾಬೀತಾಗಿದೆ. ಇಂದು ಜಗತ್ತಿನಾದ್ಯಂತ ಸುಮಾರು 70% ಅಓರ್ಟಿಕ್ ಕವಾಟ ಬದಲಾವಣೆಗಳು ಖಿಂಗಿಖ ಮೂಲಕವೇ ನಡೆಯುತ್ತಿವೆ.
ಪ್ರಾರಂಭದಲ್ಲಿ ಈ ಚಿಕಿತ್ಸೆಯ ವೆಚ್ಚ ಹೆಚ್ಚು ಮತ್ತು COVID-19 ಪರಿಣಾಮದಿಂದ ಇದನ್ನು ವ್ಯಾಪಕವಾಗಿ ಬಳಸಲಾಗಲಿಲ್ಲ. ಆದರೆ, ಭಾರತದ ಮೆರಿಲ್ ಲೈಫ್ ಸೈನ್ಸಸ್ (ಮೈವಾಲ್ವ್) ಮುಂತಾದ ಕಂಪನಿಗಳ ಪ್ರವೇಶದಿಂದಾಗಿ ವೆಚ್ಚ ಕಡಿಮೆಯಾಗಿ ಹೆಚ್ಚು ರೋಗಿಗಳಿಗೆ ಈಗ ಲಭ್ಯವಾಗುತ್ತಿದೆ. ಚಿಕಿತ್ಸೆಯ ನಂತರ ಅನೇಕರು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.
TAVR (ಟ್ರಾನ್ಸ್ಕಾಥೆಟರ್ ಅಓರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್) ಎಂದರೆ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆ ಇಲ್ಲದೆ ಅಓರ್ಟಿಕ್ ಕವಾಟ ಬದಲಿಸುವ ವಿಧಾನ. ಜನರಲ್ ಅನಸ್ತೇಷಿಯಾ ಬದಲು ಕೇವಲ ಹೊಟ್ಟೆಕಾಲಿನ ಭಾಗಕ್ಕೆ ಸ್ಥಳೀಯ ಅನಸ್ತೇಷಿಯಾ ನೀಡಲಾಗುತ್ತದೆ. ಫೆಮೋರಲ್ ಧಮನಿಯ ಮೂಲಕ ಹೊಸ ಕೃತಕ ಕವಾಟವನ್ನು ಹೃದಯಕ್ಕೆ ಸಾಗಿಸಲಾಗುತ್ತದೆ.
ಬೋವಿನ್ ಪೆರಿಕಾರ್ಡಿಯಮ್ ಅಥವಾ ಪೋರ್ಸಿನ್ ಟಿಶ್ಯೂಗಳಿಂದ ತಯಾರಿಸಿದ ಕವಾಟವನ್ನು ಲೋಹದ ಫ್ರೇಮ್ ಮೇಲೆ ಅಳವಡಿಸಲಾಗಿರುತ್ತದೆ. ಫ್ಲೂರೋಸ್ಕೋಪಿಯ ಮಾರ್ಗದರ್ಶನದಲ್ಲಿ ಇದನ್ನು ಹಾಳಾದ ಅಓರ್ಟಿಕ್ ಕವಾಟದ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ಹೊಸ ಕವಾಟವು ಹಳೆಯ ಕವಾಟವನ್ನು ಬದಿಗಟ್ಟಿಕೊಂಡು ಬಲವಾಗಿ ತನ್ನ ಸ್ಥಾನದಲ್ಲಿ ನಿಲ್ಲುತ್ತದೆ. ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ, ಒಂದು ಗಂಟೆಯೊಳಗೆ ಮುಗಿಯುತ್ತದೆ, ಬಹುತೇಕ ರೋಗಿಗಳು 24 ಗಂಟೆಯೊಳಗೆ ಮನೆಗೆ ಹೋಗಬಹುದು. ಸಾಮಾನ್ಯ ಅನಸ್ತೇಷಿಯಾ ಬೇಡ, ನೋವು ಕಡಿಮೆ, ಗಂಭೀರ ಸಮಸ್ಯೆಗಳು ಬಹಳ ವಿರಳ.
-ಡಾ. ಯೂಸುಫ್ ಎ. ಕುಂಬ್ಳೆ
MBBS, MD, DM (Cardiology–AIIMS), (DNB-Cardio)
FSCAI, FESC, FACC (USA)
ಮುಖ್ಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್
ವ್ಯವಸ್ಥಾಪಕ ನಿರ್ದೇಶಕ,
ಇಂಡಿಯಾನಾ ಹಾಸ್ಪಿಟಲ್ & ಹಾರ್ಟ್ ಇನ್ಸ್ಸ್ಟಿಟ್ಯೂಟ್, ಮಂಗಳೂರು

