ಮಂಗಳೂರು :  ಮೇ 30, 2025 ರಂದು ಅಶ್ವಿನಿ ಅವ್ರ ಬಾಳಿನ ಸಂತೋಷದ ಕೊನೆ ದಿನ. ತನ್ನ ಇಬ್ಬರು ಮುದ್ದು ಮಕ್ಕಳೊಂದಿಗೆ ಗಂಡ ,ಅತ್ತೆ ಮಾವನ ಜೊತೆ ನೆಮ್ಮದಿಯೆಂದ ಜೀವನ ನಡೆಸಿತ್ತಿರುವಾಗಲೇ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ ಅವರ ಬಾಳಲ್ಲಿ ದೊಡ್ಡ ದುರಂತ ಒಂದು ನಡೆದೇ ಹೋಯಿತು.

ಮೇ 30- ಅಂದು ರಾತ್ರಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿತ್ತು ಎಲ್ಲರೂ ಉಂಡು ಚಳಿಗೆ ಬೆಚ್ಚಗೆ ಹೊದಿಕೆ ಹಾಕಿ  ಬೆಚ್ಚಗೆ ಗಾಢ ನಿದ್ರೆಗೆ ಜಾರಿದ್ದ ಸಮಯದಲ್ಲಿ ಸುಮಾರು ಮುಂಜಾನೆ 4 ಘಂಟೆ ಸಮಯದಲ್ಲಿ ಮನೆಯ ಹಿಂಬದಿಯ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಕುಸಿದ ಮನೆಯ ಅವಶೇಷಗಳಡಿ ಸಿಲುಕಿ ತಾಯಿ-ಮಗು ಸುಮಾರು 8 ಗಂಟೆ ಜೀವನ್ಮರಣದೊಂದಿಗೆ ಹೋರಾಡಿದ ಘಟನೆ ನಡೆಯಿತ್ತು. ಕೊಣಾಜೆಯ ಮಂಜನಾಡಿ ಗ್ರಾಮದ ಮೊಂಟೆಪದವು ಇತ್ತಲಕೋಡಿ ಕೊಪ್ಪಲ ಗುಡ್ಡ ಕುಸಿದು ವಾಸದ ಮನೆ ಮೇಲೆ ಬಿದ್ದ ಮನೆಯಲ್ಲಿ ಕಾಂತಪ್ಪ, ಪತ್ನಿ ಪ್ರೇಮಪೂಜಾರಿ, ಸೀತಾರಾಮ ಪೂಜಾರಿ, ಇವರ ಪತ್ನಿ ಅಶ್ವಿನಿ, ಮಕ್ಕಳಾದ ಪುತ್ರ ಆರ್ಯನ್, ಪುತ್ರಿ ಅರುಷಾ ಇದ್ದರು.

ಗುಡ್ಡ ಕುಸಿದು ಮನೆ ಮೇಲೆ ಬೀಳುವುದನ್ನು ಗ್ರಹಿಸಿದ ಮನೆಯ ಯಜಮಾನ ಕಾಂತಪ್ಪ ಹೊರಗೆ ಓಡಿಬರುವ ಹಂತದಲ್ಲಿ ಅವಶೇಷಗಳಡಿ ಸಿಲುಕಿದ್ದಾರೆ. ಅವರನ್ನು ಸ್ಥಳೀಯರು ಪತ್ತೆಹಚ್ಚಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಕಾಲಿಗೆ ಹಾನಿಯಾಗಿದೆ. ಕಾಂತಪ್ಪ ಅವರ ಪತ್ನಿ ಪ್ರೇಮ ಪೂಜಾರಿ(52) ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶ್ವಿನಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ವೇಳೆ ಅವರ ಮೇಲೆ ಮನೆ ಕುಸಿದಿದ್ದು, ಮೇಲಾವಣಿಯ ಬೀಮ್ ಅಶ್ವಿನಿಯವರ ಸೊಂಟದ ಭಾಗದ ಮೇಲೆ ಅಪ್ಪಳಿಸಿದೆ. ಹೀಗಾಗಿ ಆಕೆ ಹೊರಬರಲಾಗದೆ ಸಿಲುಕಿಕೊಂಡಿದ್ದರು.

ಮನೆ ಕುಸಿಯುವ ವೇಳೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ತನ್ನ ದೇಹ ಮತ್ತು ಕೈಗಳನ್ನು ಅಡ್ಡಲಾಗಿ ಇಟ್ಟು ಜೀವ ಉಳಿಸುವ ಪ್ರಯತ್ನ ಮಾಡಿ ಮಾತೃ ಹೃದಯ ಪ್ರದರ್ಶಿಸಿದ್ದಾರೆ. ಮುಂಜಾನೆ ಸ್ಥಳೀಯರು ಬಂದು ನೋಡಿದಾಗ ಮೂರು ವರ್ಷದ ಆರ್ಯನ್ಗೆ ಯಾವುದೇ ಚಲನೆ ಇರಲಿಲ್ಲ. ತಾಯಿಯ ಮತ್ತೊಂದು ಮಗ್ಗಲುನಲ್ಲಿದ್ದ ಮಗು ಅರುಷಾ ಕೈಗಳನ್ನು ಅಲುಗಾಡಿಸುತ್ತಿತ್ತು.

ಸ್ಥಳೀಯರು ಅಶ್ವಿನಿ ಹಾಗೂ ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರು. ಆದರೆ ಅದು ಕಷ್ಟಸಾಧ್ಯವಾಗಿತ್ತು. ಈ ವೇಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅಶ್ವಿನಿ ತನಗಿಂತ ಮೊದಲು ತನ್ನ ಮಕ್ಕಳನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾರೆ. ತಾಯಿಯ ಪಕ್ಕದಲ್ಲಿದ್ದ ಮಗು ತನ್ನ ಎರಡೂ ಕೈಗಳನ್ನು ಅಲುಗಾಡಿಸುತ್ತಿತ್ತು. ಈ ದೃಶ್ಯ ಕರುಳು ಹಿಂಡುವಂತಿತ್ತು. ಕಣ್ಣೆದುರಿಗೆ ತಾಯಿ, ಮಕ್ಕಳು ನರಳಾಡುತ್ತಿದ್ದರೂ ರಕ್ಷಿಸಲಾಗದೆ ಸ್ಥಳೀಯರು ಕಣ್ಣೀರು ಹಾಕುತ್ತಿದ್ದರು. ಮನಕಲುಕುವ ಈ ದೃಶ್ಯ ರಕ್ಷಣಾ ಕಾರ್ಯಕ್ಕೆ ಆಗಮಿಸಿದ ಎಸ್‌.ಡಿಆ‌ರ್.ಎಫ್ ಸಿಬ್ಬಂದಿಗಳು ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಿತ್ತು.

ಕಾರ್ಯಾಚರಣೆ ಬಳಿಕ ಆರ್ಯನ್ ಮೃತದೇಹವನ್ನು ಹೊರತೆಗೆಯಲಾಗಿದೆ. ಅಶ್ವಿನಿ ಮತ್ತು ಅರುಷಾ ಅವರ ರಕ್ಷಣಾ ಕಾರ್ಯ ಮಧ್ಯಾಹ್ನದವರೆಗೂ ನಡೆಯಿತು. ಕೊನೆಗೂ ತಾಯಿ-ಮಗುವನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅರುಷಾ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 3ಕ್ಕೆ ಹೆಚ್ಚಿದೆ. ಮಕ್ಕಳಿಬ್ಬರನ್ನು ಕಳೆದುಕೊಂಡು ತಾಯಿ ಆಸ್ಪತ್ರೆ ಯಲ್ಲಿ ಕಣ್ಣೀರು ಹಾಕಿದ್ದಾರೆ.

ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯ ವಿಳಂಬವಾಗಿತ್ತು. ತೋಟದಲ್ಲಿ ಕಾಂತಪ್ಪನವರು ಮನೆ ನಿರ್ಮಿಸಿಕೊಂಡಿದ್ದರಿಂದಾಗಿ ಅಲ್ಲಿಗೆ ದೊಡ್ಡ ಪ್ರಮಾಣದ ಜೆಸಿಬಿ, ಇಟಾಚಿ ಅಥವಾ ಅರ್ಥ ಮೂವ‌ರ್ಗಗಳನ್ನು ತೆಗೆದುಕೊಂಡು ಹೋಗಲು ಕಷ್ಟವಾಗಿತ್ತು. ಎಸ್‌ಡಿಆರ್ಎಫ್ ಸಿಬ್ಬಂದಿಗಳು ಎರಡೂವರೆ ಕಿ.ಮೀ ದೂರ ಕಾರ್ಯಾಚರಣೆಯ ಸಲಕರಣೆಗಳನ್ನು ಹೊತ್ತು ಸಾಗಿಸಬೇಕಾಯಿತು. ಜೊತೆಗೆ ತಾಯಿ, ಮಕ್ಕಳು ಬದುಕಿದ್ದರಿಂದ ಕಾರ್ಯಚರಣೆ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿತ್ತು.

ಸ್ವಲ್ಪ ವ್ಯತ್ಯಾಸವಾದರೂ ಅವಶೇಷಗಳಡಿ ಸಿಲುಕಿರುವ ತಾಯಿ-ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾಗಿತ್ತು. ರಕ್ಷಣಾ ಕಾರ್ಯಚರಣೆ ಸಿಬ್ಬಂದಿಗಳು ಬೃಹತ್ ಮರಗಳನ್ನು ಕತ್ತರಿಸಿ ಅವಶೇಷಗಳಡಿ ಸಿಲುಕಿದ್ದ ತಾಯಿ-ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಆರುಷಾ ಮೃತಪಟ್ಟಿದೆ.

ಈ ಘಟನೆ ನಡೆದು 4 ತಿಂಗಳು ಆಗುತ್ತಾ ಬಂತು ಅದೆಷ್ಟು ಮಂದಿ ಈ ಘಟನೆಯನ್ನ ಮರೆತಿರಬಹುದು, ತನ್ನ ಹೊಡ ಹುಟ್ಟಿದವರ ಜೊತೆ ಪಾವೂರ್ನಲ್ಲಿ ದಿನಕಳೆಯುತಿದ್ದರೆ. ಅವರ ಚಿಕಿಸ್ಥೆಗೆ ದಾನಿಗಳ ನೆರವು ನೋಡುತ್ತಿದ್ದಾರೆ. ಕೃತಕ ಕಾಲು ಜೋಡಣೆಗೆ ೨೫ ಲಕ್ಷದ ಅವಶ್ಯಕತೆ ಇದ್ದು ದಾನಿಗಳ ನೆರವು ಬೇಡುತ್ತಿದ್ದಾರೆ. ಈ ಘಟನೆ ಎಂತಹ ಕಲ್ಲು ಹೃದಯ ಕೂಡ ಕರಗುವಂತೆ ಮಾಡುತ್ತದೆ ಸಹಾಯ ಬಯಸುವ ದಾನಿಗಳು ಈ ಕೆಳಗಿನ ಬಾರ್ ಕೋಡ್ ಅಥವಾ ಬ್ಯಾಂಕ್ ಅಕೌಂಟ್ಗೆ ನೀಡಬಹುದಾಗಿದೆ.

Account details

Name : Ashwini

Account no : 44161332978

IFSC : SBIN0071039

Branch: Harekala

State bank of India

Paytm upi : 8050160665@pthdfc

+91 97431 05910 chetan ಇವರನ್ನ ಸಂಪರ್ಕಿಸಬಹುದು