ಮಂಗಳೂರು: ದ.ಕ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮೂಡುಬಿದ್ರಿ ಪಾಲಡ್ಕ ಎರುಗುಂಡಿ ಫಾಲ್ಸ್ ನಲ್ಲಿ ಪ್ರವಾಸಿಗರ ಮೋಜಿನಾಟ ನಡೆಸುತ್ತಿದ್ದಾರೆ. ಅಪಾಯ ಲೆಕ್ಕಿಸದೆ ಫಾಲ್ಸ್ ನಲ್ಲಿ ಪ್ರವಾಸಿಗರು ನೀರಾಟವಾಡುತ್ತಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.
ಈ ಹಿಂದೆ ಕೂಡ ಸ್ಥಳದಲ್ಲಿ ಹಲವಾರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಕೂಡಲೇ ಎಚ್ಚೆತ್ತು ಕಠಿಣ ಕ್ರಮಕ್ಕೆ ಸ್ಥಳಿಯರು ಆಗ್ರಹಿಸಿದ್ದಾರೆ.

