ಪುತ್ತೂರು: ಟಯರ್ ಸ್ಪೋಟಗೊಂಡು ಕಾರ್ಮಿಕರಿಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದ ಗೋಳಿಕಟ್ಟೆ ಮಸೀದಿ ಬಳಿ ನಡೆದಿದೆ.ಘಟನೆಯ ದೃಷ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಾರಿ ಟಯರ್ ಪಂಕ್ಚರ್ ಹಾಗಿದ್ದ ಹಿನ್ನಲೆ ಪಂಕ್ಚರ್ ಹಾಕಿಸಲು ಚಾಲಕ ಕರಾಯದಿಂದ ಆಟೋದಲ್ಲಿ ಟಯರ್ ಜೋಡಣೆ ಮಾಡಲು ಕಾರ್ಮಿಕನನ್ನು ಕರೆ ತಂದಿದ್ದರು. ಪಂಕ್ಚರ್ ಹಾಕುತ್ತಿದ್ದ ವೇಳೆ ಟಯರ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಹಾರಿ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.ಈ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

