ಮಂಗಳೂರು : ನಮ್ಮ ಧರ್ಮಗಳ ಸಂಸ್ಕೃತಿ ಪ್ರಕಾರದಲ್ಲಿ ಹಬ್ಬಗಳ ಆಚರಣೆಗೆ ಯಾರಿಂದಲೂ ತೊಂದರೆ ಆಗದು. ಹಬ್ಬ ಹರಿದಿನಗಳನ್ನು ವೈಭದಿಂದ ಆಚರಿಸಲು ಯಾವ ಅಡೆತಡೆಯೂ ಇಲ್ಲ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆ‌ರ್. ಪೂಜಾರಿ ಹೇಳಿದರು.

ಕಾನೂನಿನ ಚೌಕಟ್ಟಿನಲ್ಲಿ ಡಿಜೆ ನಿಷೇಧಿಸಲಾಗಿದೆ. ಕಾಲಮಿತಿ ಬಿಜೆಪಿ ಆಡಳಿತದ ಅವಧಿಯಲ್ಲಿಯೂ ಇತ್ತು. ಅಧಿಕಾರಿಗಳ ಕೆಲಸ ಕಾನೂನು ಪಾಲನೆ ಮಾಡುವುದು. ಶ್ರದ್ಧಾಭಕ್ತಿಯ ಆಚರಣೆಗೆ ಪೊಲೀಸರು ಹಿಂದೆಯೂ ಅಡ್ಡಿ ಪಡಿಸಿಲ್ಲ.

ಆದರೆ ಬಿಜೆಪಿಯವರಿಗೆ ಇಂತಹ ವಿಚಾರ ಬಿಟ್ಟರೆ ಮಾತನಾಡಲು ವಿಷಯವೇ ಇಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಜನಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಿದ್ದು, ಜನಪರ ಕೆಲಸ ಮಾಡಲು ಎಂದವರು ಹೇಳಿದರು.