ಮಂಗಳೂರು: ಸೌಹಾರ್ದ ಇಡೀ ಜಗತ್ತಿನಲ್ಲಿ ಇಲ್ಲ ಅದನ್ನು ನಾವು ಇಲ್ಲಿ ಕುಳಿತು ಸಭೆ ನಡೆಸುವುದರಿಂದ ಮಾಡಲು ಸಾಧ್ಯವಿಲ್ಲ. ಆದರೆ ಶಾಂತಿ ನೆಲೆಸುವಂತಾಗಲು ಜನರ ಮನಸ್ಥಿತಿ ಬದಲಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲಿ ಸಮಸ್ಯೆ ಇದೆಯೋ ಅದನ್ನು ಸರಿಮಾಡಿದರೆ ಎಲ್ಲವೂ ಸರಿಯಾಗುತ್ತದೆ ಗೋಕಳ್ಳತನ ಒಂದು ಅಪರಾಧ, ಅದನ್ನು ಆಗದಂತೆ ಪೊಲೀಸರು ತಡೆದರೆ ಗಲಾಟೆಗೆ ಅವಕಾಶ ಇರುವುದಿಲ್ಲ. ಮರಳು ದಂಧೆ ಈಗ ಸರಿಯಾಗಿದ್ದು ಹೇಗೆ. ಕಠಿಣ ಕ್ರಮ ಆಗಬೇಕೇ ಹೊರತು ಅದು ಆಗದೇ ಇದ್ದರೆ ನಾವು ಸಭೆ ಮಾಡ್ತಾ ಇರಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ 30ಕ್ಕೂ ಹೆಚ್ಚು ಜನ ಮಾತನಾಡಿದರು. ಸಭೆಯ ಕೊನೆಯಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೃಹ ಸಚಿವರ ಬಗ್ಗೆಯೇ ಪ್ರಶ್ನೆ ಎತ್ತಿದರು. ನೀವು ಇಷ್ಟು ಬಾರಿ ಮಂಗಳೂರಿಗೆ ಬಂದರೂ, ಎರಡು ವರ್ಷದಲ್ಲಿ ಒಮ್ಮೆಯೂ ಇಲ್ಲಿನ ಶಾಸಕರು, ಸಂಸದರ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾ ತಾಡಿಲ್ಲ. ಜನರ ಸಮಸ್ಯೆಗಳನ್ನು ನಿಮ್ಮ ಮುಂದಿಡುವುದು ಶಾಸಕರ ಕರ್ತವ್ಯ ಎಂದರು.

