ಮಂಗಳೂರು: ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರಿಗೆ ಹಣಕ್ಕಾಗಿ ಪೀಡಿಸಿ, ಹಲ್ಲೆಗೆ ಯತ್ನಿಸಿ, ದನಗಳನ್ನು ಕಡಿಯಲು ಕೊಡ್ತೀಯಲ್ವಾ ಎಂದು ಮೂವರು ಆರೋಪಿಗಳು ಹಫ್ತಾ ಕೇಳಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಎಂಬಲ್ಲಿ ನಡೆದಿದೆ.

ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಎಂಬವರ ಮನೆಗೆ ಮೂವರು ಆರೋಪಿಗಳು ನುಗ್ಗಿದ್ದರು. ಶ್ಯಾಮಸುಂದರ್ ಶೆಟ್ಟಿ ,ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಸೇರಿ ಹಫ್ತಾ ನೀಡವಂತೆ ಬೆದರಿಕೆ ನೀಡಿದ್ದರು.

ಮುಂಬಯಿಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ, ಜಾಗ ಮತ್ತು ಮನೆಯನ್ನು ಶಂಸುದ್ದೀನ್ ನೋಡಿಕೊಳ್ಳುತ್ತಿದ್ದರು. ಮುಲ್ಕಿಯ ಅರಸು ಕಂಬಳದಲ್ಲಿ ಶಂಸುದ್ದೀನ್ ತಂದಿದ್ದ ಕೋಣಗಳಿಗೆ ಬಹುಮಾನ ಸಿಕ್ಕಿತ್ತು. ಬಹುಮಾನವಾಗಿ ಸಿಕ್ಕಿ ಬಂಗಾರದ ಸರದ ಜೊತೆಗೆ ಹಣ ಕೊಡಬೇಕೆಂದು ಬೆದರಿಕೆ ಹಾಕಿ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದರು.

ಪ್ರಕರಣದ ತನಿಖೆ ನಡೆಸಿ ಶ್ಯಾಮಸುಂದರ್ ಶೆಟ್ಟಿ ಮತ್ತು ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಎಂಬವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಅನೇಕ ಪ್ರಕರಣ ಇರೋದರಿಂದ kocca ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನಿಕಾಧಿರಿಯಿಂದ ನ್ಯಾಯಾಲಕ್ಕೆ ದಾಖಲೆ ಸಲ್ಲಿಕೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.