ಮಂಗಳೂರು : ಮುದ್ರಣ ಮಾಧ್ಯಮ ಗಳ ಮೇಲೆ ಜನರಿಗೆ ಹೆಚ್ಚು ವಿಶ್ವಾಸ್ ಇನ್ನೂ ಉಳಿದಿದೆ ಎನ್ನುವ ಅಭಿಪ್ರಾಯ ಇದೆ ಎಂದು ವಾಲ್ಟರ್ ನಂದಳಿಕೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಮಾಧ್ಯಮದ ಸವಾಲು ಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. .ಇತ್ತೀಚೆಗೆ ಸಮೀಕ್ಷೆ ಯೊಂದರ ಪ್ರಕಾರ ಶೇ.60ರಷ್ಟು ಜನರು ಮುದ್ರಣ ಮಾಧ್ಯಮವನ್ನು ನಂಬುತ್ತಾರೆ.
ಶೇ.63ರಷ್ಟು ಜನರು ಟಿ.ವಿ ನ್ಯೂಸ್ ನ್ನು ನಂಬುವುದಿಲ್ಲ.ಶೇ 89 ರಷ್ಟು ಮಂದಿ ಸಾಮಾಜಿಕ ಮಾಧ್ಯಮಗಳನ್ನು ಆನ್ ಲೈನ್ ವೆಬ್ ಸೈಟ್ ಗಳನ್ನು ನಂಬುವುದಿಲ್ಲ ಎಂದವರು ತಿಳಿಸಿದ್ದಾರೆ.
ಮಾದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ,ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನದ ಪ್ರವೇಶವಾಗಿದೆ ಆದರೆ ಸೃಜನಶೀಲತೆ ಮೂಲಕ ಈ ಸವಾಲು ಗಳನ್ನು ಎದುರಿಸಬಹುದು. ಮಾಧ್ಯಮ ಗಳು ಜನರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿ ಸುವ ಬಗ್ಗೆ ಹೆಚ್ಚು ಕಾರ್ಯ ಪ್ರವೃತ್ತ ವಾಗಬೇಕು ಎಂದರು.

