ಮಂಗಳೂರು : ಇದು ಮಂಗಳೂರು ತಾಲೂಕಿನ ಗುರುಪುರ ಆನೆಬಳಿ ಪ್ರದೇಶ. ಇಲ್ಲಿ ಬದುಕುತ್ತಿರುವ ಬಡ ಕುಟುಂಬಗಳ ಕಣ್ಣಲ್ಲಿ ಈಗ ಹನಿ ನೀರಿಲ್ಲ! ಕಾರಣ, ‘ಸ್ಥಳೀಯ ನಿವಾಸಿ ಅವ್ವದ ಎಂಬವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಜೆಸಿಬಿ ಮೂಲಕ ತಮ್ಮ ಜಾಗದ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿ ಮಣ್ಣು ತೆರವು ಗೊಳಿಸಿದ್ರು.
ಈ ಬಗ್ಗೆ ಸ್ಥಳೀಯ ಪಂಚಾಯತ್ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು, ಆದ್ರೆ ಅಧಿಕಾರಿಗಳು ಮಾತ್ರ ತಾಮಗು ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಇದೀಗ ಇತ್ತೇಚೆಗೆ ಸುರಿದ ಮಳೆಗೆ ಸ್ಥಳೀಯ ನಿವಾಸಿ ಅಜ್ಮಲ್ ಅವರ ಮನೆಯ ಹಿಂಭಾಗದ ಮಣ್ಣು ಕುಸಿತ ಗೊಂಡು ಮನೆಯ ಹಿಂಬಾಗ ಕುಸಿದಿದು ಬಿದ್ದಿದೆ,
ಇನ್ನು ಮನೆ ಯಾವುದೇ ಕ್ಷಣದಲ್ಲೂ ಸಂಪೂರ್ಣ ಧರೆಗುರುಲಾಲಿದೆ ಮಾತ್ರವಲ್ಲದೇ ಇನ್ನು ಮೂರಕ್ಕೂ ಅಧಿಕ ಮನೆ ಕುಶಿತ ಬೀಥಿಯಲ್ಲಿದ್ದು ಪಂಚಾಯತ್ ಮಾತ್ರ ಎಲ್ಲರೂ ಗಂಜಿ ಕೇಂದ್ರ ತೆರಳುವಂತೆ ಪತ್ರ ನೀಡಿ ಹೋಗಿದ್ದಾರೆ. ಆದ್ರೆ ಸ್ಥಳೀಯ ದಾನಿಯೊಬ್ಬರ ನೆರವಿಂದ ಬಾಡಿಗೆ ಮನೆಯಲ್ಲಿದ್ದೇವೆ ಎಂದು ಸ್ಥಳೀಯ ನಿವಾಸಿ ಅಜ್ಮಲ್ ಹೇಳಿದರು.
ಇಷ್ಟೆಲ್ಲಾ ಆದರು ಸ್ಥಳೀಯ ಆಡಳಿತದ ಕಣ್ಣು ಮಾತ್ರ ತೆರೆದಿಲ್ಲ! ಸಂತ್ರಸ್ತರು ಮೂರು ವಾರಗಳ ಹಿಂದೆಯೇ ಸ್ಥಳೀಯ ಗ್ರಾಮ ಪಂಚಾಯತ್ಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪಿಡಿಒ ಮಾಡಿದ ಕೆಲಸವೇನು ಗೊತ್ತಾ? ಕೇವಲ ‘ಟಾರ್ಪಾಲ್ ಹಾಕಿ ಮುಚ್ಚುತ್ತೇವೆ’ ಎಂದು ಹಾರಿಕೆ ಉತ್ತರ ನೀಡಿ ಹೋದವರು ಇತ್ತ ತಲೆನೂ ಹಾಕಿಲ್ಲ,
ಅಷ್ಟೇ ಅಲ್ಲ, ಪಂಚಾಯತ್ನಲ್ಲಿ ‘ಹಣ ಇಲ್ಲ’ ನಮಗೆ ಟಾರ್ಪಲ್ ಹಾಕಬೇಕು ಎನ್ನುವ ಪ್ರಾವಿಷನ್ ಇಲ್ಲ ಎಂಬ ಉಡಾಫೆ ಮಾತುಗಳನ್ನಾಡಿ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆಯುತ್ತಿದ್ದಾದ್ರೆ.ಇನ್ನು ಇಷ್ಟಲ್ಲದೆ ಈ ಭಾಗದಲ್ಲಿ ೫೦೦ ಸರಬರಾಜಾಗುವ ಪಂಚಾಯತ್ ನ ಬ್ರಹತ್ ನೀರಿ ಟ್ಯಾಂಕ್ ಇದ್ದು ಈ ಪ್ರದೇಶ ಕುಷಿತ ಆದ್ರೆ ರಾಷ್ಟ್ರೀಯ ಹೆದ್ದಾರಿಯು ಕುಸಿಯಲಿದೆ ಎನ್ನುತ್ತಾರೆ ಸಮಾಜ ಸೇವಕರಾದ ಲತೀಫ್ ಗುರುಪುರ
ಒಟ್ಟಿನಲ್ಲಿ ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆ ಮತ್ತು ಸ್ಥಳೀಯ ಆಡಳಿತದ ಬೇಜವಾಬ್ದಾರಿಯಿಂದಾಗಿ ಇಂದು ಮೂರು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದ್ದರೂ ಅಧಿಕಾರಿಗಳು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಕ್ಷಣವೇ ಜಾಗೃತರಾಗಿ ಅಪಾಯದಲ್ಲಿರುವ ಮನೆಗಳಿಗೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕಲ್ಪಿಸಲೀ ಎಂಬುದು ನಮ್ಮ ಆಶಯವಾಗಿದೆ.

