ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ತೂಟೆದಾರ ಸೇವೆ ನಡೆಯಿತು. ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಅವಭೃತಸ್ಥಾನ ಬೆಳಗ್ಗಿನ ಜಾವ ಈ ಇತಿಹಾಸ ಪ್ರಸಿದ್ಧ ತೂಟೆದಾರ ನಡೆಯುತ್ತದೆ.
ಕಟೀಲು ದೇವಿಗೆ ಬಲು ಇಷ್ಟವಾದ ಈ ತೂಟೆದಾರ ಸೇವೆಯನ್ನ ದುಷ್ಟ ಶಕ್ತಿಗಳನ್ನು ಸಂಹರಿಸಿದ ಶ್ರೀದೇವಿಯನ್ನ ಸಂತೃಪ್ತಿಪಡಿಸಲು ಈ ಬೆಂಕಿಯಾಟವನ್ನ ನಡೆಸಲಾಗುತ್ತೆ ಅನ್ನೋ ಐತಿಹ್ಯವಿದೆ.
ಸ್ಥಳೀಯ ಎರಡು ಗ್ರಾಮಗಳಾದ ಅತ್ತೂರು ಹಾಗೂ ಕೊಡೆತ್ತೂರು ಗ್ರಾಮದ ಗ್ರಾಮಸ್ಥರು ವೃತನಿಷ್ಠೆಯಿಂದ ಇದ್ದು,ದೇವಿಯ ಅವಭೃತ ಸ್ನಾನದ ಬಳಿಕ ಎಲ್ಲರೂ ನಂದಿನಿ ನದಿಯಲ್ಲಿ ಸ್ನಾನ ಮಾಡಿ ದೇವಿಯ ಪ್ರಸಾದ ಹಚ್ಚಿ ದೇವಸ್ಥಾನದ ಎದುರು ಈ ತೂಟೆದಾರ ನಡೆಸ್ತಾರೆ.
ಈ ವೇಳೆ ಎರಡೂ ಕಡೆಯ ಹೊಡೆದಾಟ ಅತಿರೇಕಕ್ಕೆ ಹೋದ್ರೂ ಅದನ್ನ ನಿಯಂತ್ರಿಸಲು ಹಿರಿಯರಿರುತ್ತಾರೆ. ಸುಮಾರು ಮೂರು ಸಲ ಈ ಹೊಡೆದಾಟ ನಡೆದು ಯಾರು ಹಿಂದೆ ಸರಿಯುತ್ತಾರೋ ಅವರು ಸೋತಂತೆ.ಈ ಆಟವನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

