ಮಂಗಳೂರು : ದ್ವೇಷ ಭಾಷಣ ಮಸೂದೆ ಅಂಗೀಕಾರಕ್ಕೆ ರಾಜ್ಯಪಾಲರ ವಿರೋಧ ವಿಚಾರವಾಗಿ ಮಂಗಳೂರಿನಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಸರಕಾರ ಕಳಿಸಿದ ಎಲ್ಲದಕ್ಕೂ ರಾಜ್ಯಪಾಲರು ಸಹಿ ಹಾಕಬೇಕೆಂದು ಇಲ್ಲ. ಈ ಮಸೂದೆಯಿಂದ ಮುಂದಿನ ದಿನಗಳಲ್ಲಿ ಆಪತ್ತು ಆಗಬಹುದು. ಕಾನೂನನ್ನ ರಾಜಕೀಯವಾಗಿ ವಿರೋಧಿಗಳನ್ನ ಹತ್ತಿಕ್ಕಲು ದುರುಪಯೋಗ ಪಡಿಸಬಹುದು. ನಮಿಗಿಂತ ಹೆಚ್ಚು ಪತ್ರಕರ್ತರಿಗೂ ಸಮಸ್ಯೆಯಾಗುತ್ತೆ ಎಂದರು.

ಸಿಜೆ ರಾಯ್ ಆತ್ಮಹತ್ಯೆ ಕೇಸ್, ಕೇಂದ್ರ ಸರಕಾರದ ವಿರುದ್ಧ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪಗಳನ್ನ ಯಾರು ಬೇಕಾದರೂ ಮಾಡಬಹುದು. ಈ ಪ್ರಕರಣ ತನಿಖೆ ಹಂತದಲ್ಲಿದೆ. ಎಲ್ಲಾ ರೀತಿಯ ತನಿಖೆಯಾಗಲಿ. ಇವತ್ತು ಚರ್ಚೆ ಮಾಡಿದ್ರೆ ತನಿಖೆಯ ಹಾದಿ ತಪ್ಪುತ್ತದೆ. ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ ಎಂದು ಮೋದಿಗೆ ಮೋಹನ್ ದಾಸ್ ಪೈ ಮನವಿ ಮಾಡಿದ್ದಾರೆ. ಮೋಹನ್ ದಾಸ್ ಪೈ ಯಾವ ಪರಿಕಲ್ಪನೆಯಲ್ಲಿ ಪತ್ರ ಬರೆದಿದ್ದಾರೆ ಗೊತ್ತಿಲ್ಲ ಎಂದರು.

ಈ ಹಿಂದಿನ ರೀತಿ ಏನು ದಾಳಿಗಳು ಆಗ್ತಾ ಇಲ್ಲ, ಬಿಜೆಪಿಯವರ ಮೇಲೂ ದಾಳಿಗಳಾಗಿದೆ. ತೆರಿಗೆ ಇಲಾಖೆ ಒಂದು ಸ್ವತಂತ್ರ ಸಂಸ್ಥೆ, ರಾಜಕೀಯ ದ್ವೇಷದ ಕಾರಣಕ್ಕೆ ಆಗುತ್ತದೆ ಅನ್ನೋದು ಸರಿಯಲ್ಲ ಎಂದರು.