ಮಂಗಳೂರು : ರಾಜ್ಯ ಸರ್ಕಾರದಿಂದ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವು ಹೂಡಿಕೆದಾರರನ್ನು ಕರಾವಳಿಯತ್ತ ಆಕರ್ಷಿಸಿದೆ.

ಸಮಾವೇಶದಲ್ಲಿ ಸಂಸದರು, ಶಾಸಕರು ಪಕ್ಷಭೇದವಿಲ್ಲದೆ ಭಾಗವಹಿಸಿರುವುದು ಸ್ವಾಗತಾರ್ಹ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ನಡೆಯನ್ನು ರಾಜಕಾರಣಿಗಳು ತೋರಿಸಬೇಕಾಗಿದೆ. ಇದೇ ಸಹಕಾರ ಮುಂದೆಯೂ ದೊರೆತರೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ಕನಸು ನನಸಾಗಲಿದೆ ಎಂದು ಪದ್ಮರಾಜ್‌ ಹೇಳಿದರು.

ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಶಾಸಕರಿಗೆ ಅನುದಾನ ತೆಗೆದುಕೊಂಡು ಬರುವ ಚಾಕಚಕ್ಯತೆ ಇರಬೇಕು. ಅನುದಾನ ತರಲು ಆಗುತ್ತಿಲ್ಲ ಎಂದರೆ ರಾಜೀನಾಮೆ ನೀಡಿ. ಇಲ್ಲವಾದರೆ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿ ಎಂದರು.