ಮಂಗಳೂರು: ಕೋಮು ಚಟುವಟಿಕೆ ನಿಗ್ರಹಕ್ಕೆ ದೇಶದಲ್ಲೇ ಪ್ರಥಮ ವಿಶೇಷ ಕಾರ್ಯಪಡೆಯನ್ನು ಗೃಹ ಸಚಿವ ಪರಮೇಶ್ವರ್ ಉದ್ಘಾಟನೆ ಮಾಡಿದರು.
ಇಷ್ಟು ದಿನ ಕೋಮು ಸಾಮರಸ್ಯ ಕೆಡಿಸುವ ಚಟುವಟಿಕೆಗಳನ್ನು ಸಾಫ್ಟ್ ಆಗಿ ಹ್ಯಾಂಡಲ್ ಮಾಡಿದ್ದೆವು. ಅದನ್ನು ಕಿವಿಗೇ ಹಾಕ್ಕೊಂಡಿಲ್ಲ. ಹಾಗಾಗಿ ಬಲ ಪ್ರಯೋಗ ಮಾಡಲು ಪಡೆ ರಚಿಸಿದ್ದೇವೆ. ಎಎನ್ಎಫ್ ನಂತೆ ಈ ಪಡೆ ಕಾರ್ಯಾಚರಿಸುತ್ತದೆ. ನಕ್ಸಲ್ ಬಹುತೇಕ ಬಂದ್ ಆಗಿದ್ದರಿಂದ ಅಲ್ಲಿನ ನುರಿತ ಸಿಬ್ಬಂದಿಯನ್ನು ಇದರಲ್ಲಿ ಬಳಸಲಾಗಿದೆ.

ಇದನ್ನು ಇಲ್ಲಿಗೇ ನಿಲ್ಲಿಸಲ್ಲ, ಅಗತ್ಯ ಬಿದ್ದರೆ ಇನ್ನಷ್ಟು ಸಿಬ್ಬಂದಿ ಅಧಿಕಾರಿಗಳ ನಿಯೋಜನೆ ಮಾಡ್ತೇವೆ. ಅವಶ್ಯಕತೆ ಬಂದರೆ ರಾಜ್ಯಕ್ಕೆ ವಿಸ್ತರಣೆ ಮಾಡಲಿದ್ದೇವೆ. ಸೈಬರ್ ಅಪರಾಧ ತಡೆಗೆ ಪ್ರತಿ ಪಿಸಿಗೂ ತರಬೇತಿ ನೀಡಲಾಗುವುದು. ಅದಕ್ಕಾಗಿ ಪ್ರತಿ ಎಸ್ಪಿ ಕಚೇರಿಯಲ್ಲಿ ಟ್ರೈನಿಂಗ್ ಯುನಿಟ್ ಸ್ಥಾಪಿಸಲಾಗಿದೆ ಎಂದರು.

