ಮಂಗಳೂರು: ದಿ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೋ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ), ರೈತರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಾಥಮಿಕ ಉದ್ದೇಶದೊಂದಿಗೆ 1973 ರಲ್ಲಿ ಸ್ಥಾಪನೆಯಾಯಿತು.
ನಮ್ಮ ಆಡಳಿತ ಮಂಡಳಿ ಮತ್ತು ಕರ್ನಾಟಕ ಹಾಗೂ ಕೇರಳದ ಎಲ್ಲಾ ಸದಸ್ಯ ಬೆಳೆಗಾರರ ಪರವಾಗಿ, ರೈತರಿಗಾಗಿ ಈ ಬೃಹತ್ ಸಹಕಾರಿ ಸಂಸ್ಥೆಯ ಭದ್ರ ಬುನಾದಿ ಹಾಕಿದ ಸಂಸ್ಥಾಪಕ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರಿಗೆ ನಾವು ಗೌರವ ನಮನ ಸಲ್ಲಿಸುತ್ತೇವೆ.
ಆರಂಭದಲ್ಲಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಬೆಂಬಲವಿದ್ದರೂ, ಕ್ಯಾಂಪ್ಕೊ 2005 ರಲ್ಲಿ ಎಲ್ಲಾ ಸರ್ಕಾರಿ ಷೇರು ಬಂಡವಾಳವನ್ನು ಹಿಂದಿರುಗಿಸುವ ಮೂಲಕ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿ ಹೊರಹೊಮ್ಮಿತು. ಅಂದಿನಿಂದ, ಸಂಸ್ಥೆಯು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಅಕ್ರಮ ಆಮದು ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆಯೂ, ಕ್ಯಾಂಪ್ಕೊ ಪ್ರತಿ ಹಂತದಲ್ಲೂ ಬೆಳೆಗಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ.
ಅಡಿಕೆ ಮತ್ತು ರೈತರ ಹಿತರಕ್ಷಣೆ
ಅಡಿಕೆ ವರ್ಗೀಕರಣದ ಕುರಿತು ಹೋರಾಟ:
ಅಡಿಕೆಯನ್ನು ಕ್ಯಾನ್ಸರ್ ಕಾರಕ (Carcinogenic) ಎಂದು ವರ್ಗೀಕರಿಸಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಈ ವರ್ಗೀಕರಣವನ್ನು ಪ್ರಶ್ನಿಸಲು ಕ್ಯಾಂಪ್ಕೊ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಡಿಕೆಯು ಅದರ ನೈಸರ್ಗಿಕ ರೂಪದಲ್ಲಿ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಲು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಒಟ್ಟುಗೂಡಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಕ್ಯಾಂಪ್ಕೊ ನಿಯೋಗವು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ನಲ್ಲಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿತು. ಡಾ. ಸ್ವಾಮಿನಾಥನ್ ಅವರು WHO ಮತ್ತು IARC ಗೆ ಕ್ಯಾಂಪ್ಕೊದ ಮನವಿಯನ್ನು ಸಲ್ಲಿಸಿ, ಮರು-ಮೌಲ್ಯಮಾಪನಕ್ಕೆ ವಿನಂತಿಸಿದ್ದಾರೆ. ಅಂತಾರಾಷ್ಟ್ರೀಯ ಏಜೆನ್ಸಿಗಳು ಪರಿಶೀಲನೆಗಾಗಿ ಅಡಿಕೆಯು ಕ್ಯಾನ್ಸರ್ ರಹಿತ ಎಂಬುದಕ್ಕೆ ವೈಜ್ಞಾನಿಕ ಡೇಟಾವನ್ನು ಕೇಳಿವೆ.
ನಿಟ್ಟೆ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಅಂಶಗಳು:
⦁ ಅಡಿಕೆ ಸಾರವು ಕ್ಯಾನ್ಸರ್ ಕೋಶಗಳನ್ನು ಶಮನಗೊಳಿಸುತ್ತದೆ ಆದರೆ ಸಾಮಾನ್ಯ ಕೋಶಗಳಿಗೆ ಸುರಕ್ಷಿತವಾಗಿದೆ ಎಂದು ಅಧ್ಯಯನ ವರದಿ ಮಾಡಿದೆ.
⦁ ಜೀಬ್ರಾ ಫಿಶ್ ಮೇಲಿನ ಪ್ರಯೋಗಗಳಲ್ಲಿ ಅಡಿಕೆ ಸಾರವು ಸುರಕ್ಷಿತವೆಂದು ದೃಢಪಟ್ಟಿದೆ.
⦁ ಸಮುದಾಯ ಆಧಾರಿತ ಅಧ್ಯಯನದಲ್ಲಿ ಕೇವಲ ಅಡಿಕೆ ಜಗಿಯುವವರಲ್ಲಿ (ಶೇ. 0.15 ರಷ್ಟು ಮಂದಿ) ಬಾಯಿಯ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿಲ್ಲ.
ಅಡಿಕೆ ಮತ್ತು ಮಾನವನ ಆರೋಗ್ಯದ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆ:
ಕ್ಯಾಂಪ್ಕೊದ ನಿರಂತರ ಮನವಿಯ ಮೇರೆಗೆ, “ಅಡಿಕೆ ಮತ್ತು ಮಾನವನ ಆರೋಗ್ಯದ ಮೇಲಿನ ಸಾಕ್ಷ್ಯಾಧಾರಿತ ಸಂಶೋಧನೆ” ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ದಿನಾಂಕ 05.02.2025 ರಂದು ಭಾರತ ಸರ್ಕಾರವು ICAR-CPCRI ನೇತೃತ್ವದಲ್ಲಿ ;
1. ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು
2. ಸಿಎಸ್ಐಆರ್-ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಸಂಸ್ಥೆ (ಎನ್ಬಿಆರ್ಐ), ಲಕ್ನೋ
3. ಐಸಿಎಆರ್-ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ), ಕಾಸರಗೋಡು
4. ಸಿಎಸ್ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ), ಮೈಸೂರು
5. ಎನ್ಐಟಿಟಿಇ ವಿಶ್ವವಿದ್ಯಾಲಯ, ಮಂಗಳೂರು
6. ಸಿಎಸ್ಐಆರ್-ಕೋಶೀಯ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ), ಹೈದರಾಬಾದ್
7. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಬೆಂಗಳೂರು
8. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ನವದೆಹಲಿ
9. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ, ಧಾರವಾಡ
10. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಬೆಂಗಳೂರು ಸೇರಿದಂತೆ 10 ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಸಮಿತಿಯನ್ನು ರಚಿಸಿದೆ.
ಅಡಿಕೆಯಲ್ಲಿ ತೇವಾಂಶ ಪ್ರಮಾಣ:
ಅಡಿಕೆಯಲ್ಲಿನ ತೇವಾಂಶದ ಮಿತಿಯನ್ನು ಪ್ರಸ್ತುತ ಇರುವ ಶೇ. 7 ರಿಂದ ಶೇ. 11 ±0.5% ಕ್ಕೆ ಹೆಚ್ಚಿಸಲು ಮತ್ತು ಅದನ್ನು ಸುರಕ್ಷಿತವೆಂದು ಪರಿಗಣಿಸಲು FSSAI ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು CPCRI ಗೆ 14.87 ಲಕ್ಷ ರೂ. ಆರ್ಥಿಕ ನೆರವು ನೀಡಲು ಮಂಡಳಿ ನಿರ್ಧರಿಸಿದೆ.
ರೋಗ ಉಲ್ಬಣಕ್ಕೆ ಸ್ಪಂದನೆ ಮತ್ತು ವೈಜ್ಞಾನಿಕ ಸಹಯೋಗ:
⦁ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಉಲ್ಬಣಗೊಂಡಾಗ, ವೈಜ್ಞಾನಿಕ ಕಾರಣಗಳನ್ನು ತನಿಖೆ ಮಾಡಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕ್ಯಾಂಪ್ಕೊ (CAMPCO) ಸಂಸ್ಥೆಗಳು, ವಿಜ್ಞಾನಿಗಳು ಮತ್ತು ರೈತ ಗುಂಪುಗಳೊಂದಿಗೆ ಸಂವಹನ ನಡೆಸಿತು.
⦁ ಅರಣ್ಯ ಉತ್ಪನ್ನ ಪಟ್ಟಿ: ಅಡಿಕೆಯನ್ನು ಅರಣ್ಯ ಉತ್ಪನ್ನ ಪಟ್ಟಿಗೆ ಸೇರಿಸಿದಾಗ, ಕ್ಯಾಂಪ್ಕೊ ತಕ್ಷಣವೇ ಮಧ್ಯಪ್ರವೇಶಿಸಿ ಒಂದೇ ದಿನದಲ್ಲಿ ಅದನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಮಾಡಿತು.
⦁ ಆಮದು ನೀತಿ ಪರಿಷ್ಕರಣೆ: ಹುರಿದ ಅಡಿಕೆಯ ಆಮದು ನೀತಿಯನ್ನು ಪರಿಷ್ಕರಿಸಲಾಗಿದ್ದು, “ಮುಕ್ತ” ವರ್ಗದಿಂದ “ನಿಷೇಧಿತ” ವರ್ಗಕ್ಕೆ ಬದಲಾಯಿಸಲಾಗಿದೆ (ಕೆಜಿಗೆ 351 ರೂ.ಗಿಂತ ಹೆಚ್ಚು ಮೌಲ್ಯವಿದ್ದರೆ ಮಾತ್ರ ಆಮದು ಮುಕ್ತ).
⦁ ಕನಿಷ್ಠ ಆಮದು ಬೆಲೆ (MIP): ಕ್ಯಾಂಪ್ಕೊದ ಪ್ರಯತ್ನದಿಂದ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಹೆಚ್ಚಿಸಲಾಗಿದೆ.
ಬೆಳೆಗಾರರಿಗೆ ನ್ಯಾಯಯುತ ಬೆಲೆ (2020 vs 2025)
ಕ್ಯಾಂಪ್ಕೊ ಬೆಳೆಗಾರರಿಗೆ ಸ್ಥಿರ ಮತ್ತು ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸಿದೆ:
⦁ ಹೊಸ ಅಡಿಕೆ: 2020 ರಲ್ಲಿ ಕೆಜಿಗೆ 240-320 ರೂ. ಇತ್ತು, 2025 ರಲ್ಲಿ 360-485 ರೂ.ಗೆ ಏರಿಕೆಯಾಗಿದೆ.
⦁ ಚಾಲಿ ಅಡಿಕೆ: 2020 ರಲ್ಲಿ ಕೆಜಿಗೆ 320-380 ರೂ. ಇತ್ತು, 2025 ರಲ್ಲಿ 360-525 ರೂ.ಗೆ ಏರಿಕೆಯಾಗಿದೆ.
⦁ ಕೆಂಪು ಅಡಿಕೆ: 2020 ರಲ್ಲಿ ಕೆಜಿಗೆ 350-398 ರೂ. ಇತ್ತು, 2025 ರಲ್ಲಿ 545-585 ರೂ.ಗೆ ಏರಿಕೆಯಾಗಿದೆ.
ಹೊಸ ಉತ್ಪನ್ನಗಳು ಮತ್ತು ಮಾರುಕಟ್ಟೆ ವಿಸ್ತರಣೆ
⦁ ’ಸೌಗಂಧ್’ ಕಾಜು ಸುಪಾರಿ ಮರುಬಿಡುಗಡೆ ಮತ್ತು ಮಾಲ್ಡೀವ್ಸ್ಗೆ ಅಡಿಕೆ ರಫ್ತು ಆರಂಭ.
⦁ ಕಾಳುಮೆಣಸು ಬೆಲೆ ಕೆಜಿಗೆ 300-330 ರೂ.ನಿಂದ 565-665 ರೂ.ಗೆ ಏರಿಕೆಯಾಗಿದೆ. “ಕಾಲಾ ಸೋನಾ” ಬ್ರಾಂಡ್ ಅಡಿಯಲ್ಲಿ ಪೆಪ್ಪರ್ ಸ್ಯಾಚೆಟ್ಗಳನ್ನು ಬಿಡುಗಡೆ ಮಾಡಲಾಗಿದೆ.
⦁ ಕ್ಯಾಂಪ್ಕೊ ಆಯುಷ್ (ಸಾವಯವ ಗೊಬ್ಬರ), ಪೌಷ್ಟಿಕ, ಡಾಲಮೈಟ್ ಮುಂತಾದ ಕೃಷಿ ಗೊಬ್ಬರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ.
ಚಾಕೊಲೇಟ್ ಕಾರ್ಖಾನೆ (CCF) ಮತ್ತು ಆಧುನೀಕರಣ
⦁ ಹೊಸ ಉತ್ಪನ್ನಗಳಾದ ಡೈರಿ ಡ್ರೀಮ್, ಫಿಯೆಸ್ಟಾ, ಎಕ್ಲೇರ್ಸ್, ಡೋಮ್ ಟ್ರಫಲ್ಸ್, ಮತ್ತು ಡಾರ್ಕ್ ಚಾಕೊಲೇಟ್ಗಳನ್ನು ಬಿಡುಗಡೆ ಮಾಡಲಾಗಿದೆ.
⦁ ಸೌರ ವಿದ್ಯುತ್ ಯೋಜನೆಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ.
⦁ ಹೊಸದಾಗಿ ತೆಂಗಿನ ಎಣ್ಣೆ ಸಂಸ್ಕರಣಾ ಘಟಕ ಸ್ಥಾಪನೆ ಮತ್ತು ‘ಕ್ಯಾಂಪ್ಕೊ ತೆಂಗಿನ ಎಣ್ಣೆ – ಕಲ್ಪ ‘ ಬಿಡುಗಡೆ.
ಸದಸ್ಯರು ಮತ್ತು ರೈತರ ಕಲ್ಯಾಣ
⦁ ವೈದ್ಯಕೀಯ ಮತ್ತು ಶಿಕ್ಷಣ ನೆರವಿಗಾಗಿ 2.34 ಕೋಟಿ ರೂ.ಗಳನ್ನು 385 ಸದಸ್ಯರಿಗೆ ವಿತರಿಸಲಾಗಿದೆ.
⦁ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಮತ್ತು ಕೃಷಿ ಯಂತ್ರ ಮೇಳ ಆಯೋಜನೆ.
⦁ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಮತ್ತು ಸಿಬ್ಬಂದಿಗಳಿಗೆ ತರಬೇತಿ.
⦁ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ಪೂರೈಸಲು 260 ಲಕ್ಷ ರೂ. ವೆಚ್ಚದಲ್ಲಿ ನೈಟ್ರೋಜನ್ ಪ್ಲಾಂಟ್ ಅಳವಡಿಕೆ.
ಡಿಜಿಟಲ್ ರೂಪಾಂತರ
⦁ ಮೆಸರ್ಸ್ ಇನ್ಫೋರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (M/s Infor India Pvt. Ltd.) ಸಹಭಾಗಿತ್ವದಲ್ಲಿ, 10 ಕೋಟಿಗೂ ಅಧಿಕ ಮೌಲ್ಯದ “ಕ್ಯಾಂಪ್ಕೊ ಸಕ್ಷಮ್” (CAMPCO SAKSHAM) ಇಆರ್ಪಿ (ERP) ವ್ಯವಸ್ಥೆಯನ್ನು ದಿನಾಂಕ 01.04.2024 ರಂದು ಯಶಸ್ವಿಯಾಗಿ ಜಾರಿಗೆ ತರಲಾಯಿತು.
ರಾಷ್ಟ್ರ ನಿರ್ಮಾಣದ ಉಪಕ್ರಮಗಳು :
⦁ ರಾಷ್ಟೀಯತೆಯ ಸಂಕೇತವಾಗಿ ರಾಷ್ಟ್ರೀಯ ರಕ್ಷಣಾ ನಿಧಿಗೆ (NDF) 5.00 ಕೋಟಿ ರೂ.ಗಳನ್ನು ದೇಣಿಗೆ ನೀಡಲಾಗಿದೆ.
⦁ ಸಾಂಕ್ರಾಮಿಕ ಸಮಯದಲ್ಲಿ ವಿಶೇಷವಾದ ಕೋವಿಡ್-19 ನೆರವನ್ನು ಒದಗಿಸಲಾಯಿತು.
⦁ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ 29.00 ಲಕ್ಷ ರೂ. ಮೌಲ್ಯದ ಸ್ಯಾಮ್ಸಂಗ್ ವಿ6 ಅಲ್ಟ್ರಾಸೌಂಡ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ.
ಆರ್ಥಿಕ ಸಾಧನೆ
⦁ ವಹಿವಾಟು ಬೆಳವಣಿಗೆ:
⦁ 2020-21 ನೇ ಸಾಲಿನ 2,134.15 ಕೋಟಿ ರೂ.ಗಳಿಂದ 2024-25 ನೇ ಸಾಲಿನಲ್ಲಿ 3,631.00 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
⦁ ಇದು 5 ವರ್ಷಗಳಲ್ಲಿ ಶೇ. 70 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ — ಇದು ಕ್ಯಾಂಪ್ಕೊದ ಬ್ರ್ಯಾಂಡ್ ಶಕ್ತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಕ್ಯಾಂಪ್ಕೊದ ಸಾಧನೆ:
|
ಅವಧಿ |
ವಹಿವಾಟು |
ಲಾಭ/ನಷ್ಟ |
ಡಿವಿಡೆಂಡ್ |
ಅಡಿಕೆಗೆ ಪ್ರೋತ್ಸಾಹ ಧನ |
ಕೊಕ್ಕೋ ಗೆ ಪ್ರೋತ್ಸಾಹ ಧನ |
|||
|
|
ರೂ (ಕೋಟಿಗಳಲ್ಲಿ) |
ರೂ (ಲಕ್ಷಗಳಲ್ಲಿ) |
|
ಸದಸ್ಯರು |
ಸೊಸೈಟಿ |
ಸದಸ್ಯರು |
ಸೊಸೈಟಿ |
|
|
|
|
|
|
|
|
|
|
|
|
2020-21 |
2,134.15 |
10,002.33 |
15% |
ರೂ.1/- ಕೆಜಿ |
ರೂ.7.5/- ಕ್ವಿ. ಗೆ |
ಒಣ ರೂ. 4/- ಕೆಜಿ
ಹಸಿ. ರೂ. 1.50/- ಕೆಜಿ |
ಕೆಜಿಗೆ ರೂ.10,000/- ವರೆಗೆ
ಕೆಜಿಗೆ ರೂ. 5,000/- ವರೆಗೆ |
10,000/- ಕೆಜಿ. ಮೇಲ್ಪಟ್ಟು
ರೂ. 10,000/- |
|
2021-22 |
2,778.39 |
6,360.035 |
15% |
ರೂ.1/- ಕೆಜಿ |
ರೂ.7.5/- ಕ್ವಿ. ಗೆ |
ಒಣ ರೂ. 4/- ಕೆಜಿ
ಹಸಿ. ರೂ. 1.50/- ಕೆಜಿ |
ಕೆಜಿಗೆ ರೂ.10,000/- ವರೆಗೆ
ಕೆಜಿಗೆ ರೂ. 5,000/- ವರೆಗೆ |
10,000/- ಕೆಜಿ. ಮೇಲ್ಪಟ್ಟು
ರೂ. 10,000/- |
|
2022-23 |
2,819.40 |
-1,229.25 |
nil |
|
|
|
|
|
|
2023-24 |
3,346.80 |
598.98 |
nil |
|
|
|
|
|
|
2024-25 |
3,631.91 |
4,665.04 |
08% |
ರೂ.1/- ಕೆಜಿ(ಮಿತಿಯಿಲ್ಲದೆ) |
ರೂ.7.5/- ಕ್ವಿ. ಗೆ |
ಒಣ ರೂ. 6/- ಕೆಜಿ ಹಸಿ. ರೂ. 1.50/- ಕೆಜಿ |
ರೂ. 2/- ಕೆಜಿಗೆ |
|
ಅನೇಕ ಸವಾಲುಗಳ ನಡುವೆಯೂ, ಕ್ಯಾಂಪ್ಕೊ ತನ್ನ ಸದಸ್ಯರಿಗೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದೆ. ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ ಇರುವ ಈ ಸಂಸ್ಥೆಯು ರೈತರ ಉಜ್ವಲ ಭವಿಷ್ಯಕ್ಕಾಗಿ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಅಧ್ಯಕ್ಷರು ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

