ಮಂಗಳೂರು: ಶಾಸಕ ವೇದವ್ಯಾಸ ಕಾಮತ್ ರವರ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ. ಶಾಲೆಗಳಲ್ಲಿ ಮಕ್ಕಳನ್ನು ಹಿಡಿದು ರಾಜಕೀಯ ಮಾಡಿದವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಜಾತಿ ಧರ್ಮಗಳ ನಡುವೆ ವಿಭಜಿಸಿ, ಹಿಂಸೆಗೆ ಪ್ರಚೋದನೆ ನೀಡಿ ಭಯ ಹುಟ್ಟಿಸುವ ಮೂಲಕ ಓಟ್ ಬ್ಯಾಂಕ್ ರಾಜಕೀಯವನ್ನು ಮಾಡಲಾಗುತ್ತಿದೆ. ಇದು ಜನರಿಗೆ ತಿಳಿಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದರು.
ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣವನ್ನು ಭೇದಿಸಿ ಆತನ ಕುಟುಂಬಸ್ಥರಿಗೆ ಪೊಲೀಸರು ನ್ಯಾಯ ಒದಗಿಸುವ ವಿಶ್ವಾಸವಿದ್ದು, ಅವರ ಕುಟುಂಬದ ಹೋರಾಟದ ಜತೆ ನಾವೂ ಇದ್ದೇವೆ ಎಂದು ಪದ್ಮರಾಜ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ ದಯಾನಂದ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

