ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ . ಮೈ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯ ಈ ಸುಂದರ ದೃಶ್ಯ ಇದೀಗ ಡ್ರೋನ್ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.

ಬಂಟ್ವಾಳದ ಮನೋಜ್ ಕೋಟ್ಯಾನ್ ಎಂಬುವವರ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದ ಸುಂದರ ದೃಶ್ಯವನ್ನು ನೋಡಲು ಬಲುಸುಂದರವಾಗಿದೆ. ಇನ್ನು ತುಂಬಿ ಹರಿಯುತ್ತಿದ್ದ ಬಂಟ್ವಾಳದ ನೇತ್ರಾವತಿ ನದಿ‌ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನುಗ್ಗಿದ್ದು ಎಲ್ಲಿ ನೋಡಿದ್ರಲ್ಲೂ ಪ್ರವಾಹದ ನೀರೇ ಕಾಣುತ್ತಿದೆ.