ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅಯೋಧ್ಯೆ ಕಾಣಿಕೆ ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದೆ. ತಪ್ಪಿತಸ್ತರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು.
ಅಯೋಧ್ಯೆ ಕಾಣಿಕೆ ಹಣ ಕಳವು ಪ್ರಕರಣದ ತನಿಖೆಗೆ ವಿಎಚ್ಪಿ ಮುಕ್ತವಾಗಿದೆ. ಅಯೋಧ್ಯೆ ರಾಮಮಂದಿರದ ಚಡಾವಾ ಹಣ ಕಳವು ವಿಚಾರ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿ ಎಚ್ ಪಿ ಒತ್ತಾಯಿಸಿತ್ತು ಎಂದರು.
ಎಸ್ಐಟಿ ರಚಿಸಿ ತನಿಖೆಗೆ ವಿ ಎಚ್ ಪಿ ಒತ್ತಾಯಿಸಿದೆ. ತನಿಖೆಗೆ ಸಹಕರಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ರಾಮಜನ್ಮಭೂಮಿ ಟ್ರಸ್ಟ್ನ ಮುಕ್ತವಾಗಿ ವರ್ತಿಸಿದೆ. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರು ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ವಿಎಚ್ಪಿ ಸ್ವತಃ ಪಎಫ್ಐಆರ್ ದಾಖಲಿಸಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
2026 ರ ಅಂತ್ಯದ ವೇಳೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಭವಿಷ್ಯದಲ್ಲಿ ಇಂತಹ ಲೋಪಗಳು ನಡೆಯದಂತೆ ತಡೆಯಲು ವೃತ್ತಿಪರ ದೇವಸ್ಥಾನ ಆಡಳಿತ ಅನುಭವವಿರುವ ಸಿಇಒ ನೇಮಕ ಮಾಡಲಾಗುವುದು. ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿಇಓ ಹುದ್ದೇಗೆ ದೇಶದ ನಾನಾ ಭಾಗಗಳಿಂದ 5000 ಅರ್ಜಿಗಳು ಬಂದಿವೆ. ಬಂದ ಅರ್ಜಿ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಸಂಸದ್ ಭವನದ ಎದುರು ಸಾಧು ವೇಷದಲ್ಲಿಸಂಸದ ಪಪ್ಪುಯಾದವ್ ಚಡಾವಾ ಚೋರಿ ಪ್ರತಿಭಟನೆ ಬಗ್ಗೆ ಪ್ರಯಿಕ್ರಿಯೆ ನೀಡಿದರು. ಸಾಧು-ಸಂತರ ನಿಂದನೆಗೆ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯನ್ನು ಅಲೋಕ್ ಕುಮಾರ್ ನೀಡಿದರು.
ವಿಪಕ್ಷಗಳ ಮಿತಿಮೀರಿ ವರ್ತಿಸುತ್ತಿರುವುದು ಖಂಡನೀಯ. ಸಂಸತ್ತಿನ ಮುಂಭಾಗದಲ್ಲಿ ವಿಪಕ್ಷ ನಾಯಕರು ಮತ್ತು ಪ್ರಮುಖ ರಾಜಕಾರಣಿಗಳು ಸಾಧು-ಸಂತರ ವೇಷಧರಿಸಿ ಅಪಮಾನ ಮಾಡಿದ್ದಾರೆ. ಭಗವಾ ವಸ್ತ್ರ ಮತ್ತು ಸಂತರ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದರು.
ಶ್ರೀರಾಮ ಮಂದಿರ ಹೋರಾಟವನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದವರು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಾಯಕರು. ಈಗ ಸಂತ ಸಮುದಾಯವನ್ನು ‘ಚೋರ್ ‘’ ಎಂದು ಬಿಂಬಿಸಲು ಯತ್ನಿಸುತ್ತಿವೆ. ಸನಾತನ ಧರ್ಮ ಮತ್ತು ಸಂತರ ನಿಂದನೆಯನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷಗಳಿಗರ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

