ಮಂಗಳೂರು: ಜಿಲ್ಲೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ನಡೆದ ಘಟನೆಯಿಂದ ಜನ ತಲೆತಗ್ಗಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ವಿಚಾರಗಳು ಹರಿದಾಡ್ತಾ ಇದೆ. ಈ ಘಟನೆ ಮಂಗಳೂರನ್ನು ಹಿಂದಕ್ಕೆ ಕೊಂಡೊಹೋಗುತ್ತಿದ್ದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಹೇಳಿಕೆ ನೀಡಿದರು.

ಈ ರೀತಿಯ ಕಾರ್ಯ ಜಿಲ್ಲೆಯಲ್ಲಿ ಅಭಿವೃದ್ಧಿಯಿಂದ ಹಿಂದುಳುಯುವಂತೆ ಮಾಡಿದೆ. ಕುಡುಪು ನಲ್ಲಿ ನಡೆದ ಹತ್ಯೆ ಮಾನವಕುಲ ತಲೆತಗ್ಗಿಸುವಂತದ್ದು. ಈ ವರೆಗೆ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಗಿಲ್ಲ. ಈ ಘಟನೆಯಲ್ಲಿ ೨೧ ಮಂದಿ ಬಂಧನ ಆಗಿದೆ ೧೭ ಮಂದಿಗೆ ನೋಇಸ್ ನೀಡಿ ತನಿಖೆ ನಡೆಸಲಾಗಿದೆ. ಬಜಪೆ ಯಲ್ಲಿ ನಡೆದ ಕೊಲೆ, ಬಳಿಕ‌ನಡೆದ ಘಟನೆಗಳಿಂದ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿದೆ.

ಈ ಕೊಲೆಯ‌ ಬಳಿಕ ಬಿಜೆಪಿ ನಾಯಕರು ಬಂದು ಏನ್ ಮಾಡಿದ್ರು. ಹಿಂದೂ ಕಾರ್ಯಕರ್ತ ಎಂದು ರಾಜ್ಯ ಮಟ್ಟದಲ್ಲಿ ಗೊಂದಲ ಸೃಷ್ಟಿ ಮಾಡಿದ್ರು. ಹಿಂದೂ ಧರ್ಮ ಎಂದು ದ್ವೇಷ ಸಾಧಿಸುವ ಕಾರ್ಯ ಮಾಡ್ತಾ ಇದ್ದಾರೆ. ಭಯೋತ್ಪಾದನೆ ಮುಸ್ಲಿಂ, ಹಿಂದೂ ಎರಡರಲ್ಲೂ ಆಗ್ತಾ ಇದೆ. ಇದನ್ನು ಧರ್ಮದ ಹೆಸರಿಲ್ಲಿ ನೋಡು ಸರಿಯಲ್ಲ‌.

ಸಾಮಾಜಿಕ ಜಾಲದಲ್ಲಿ ಬರೆಯುವವರು ತಮ್ಮ ತಂದೆ ತಾಯಿ ಗೌರವ ಹೆಚ್ಚಿಸುವಂತೆ ಮಾಡುವಂತಿರಲಿ. ಅವರು ಸಾಮಾಜ ಮುಂದೆ ತಲೆತಗ್ಗಿಸುವಂತೆ ಮಾಡಬೇಡಿ. ವಿರೋಧ ಪಕ್ಷದ ನಾಯಕರು ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ. ಸುಹಾಸ್ ಶೆಟ್ಟಿ ಮೇಲೆ ರೌಡಿ ಶೀಟರ್ ಹಾಕಿದ್ದು ಯಾರ ಸರ್ಕಾರ. ಇಲ್ಲಿ ಬಿಜೆಪಿ ನಾಯಕರು ಜನ್ರನ್ನು ದಾರಿ ತಪ್ಲಿಸುವ ಕಾರ್ಯ ಮಾಡ್ತಾ ಇದೆ.

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಮಾತುಗಳನ್ನು ದೇವರು ಮೆಚ್ಚುತ್ತಾರ…? ಶಾಸಕನಾಗಿದ್ದವರು ಇತರರಿಗೆ ಮಾದರಿ ಆಗಬೇಕೆ… ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿಯ ಮಾತುಗಳು ಎಷ್ಟು ಸರಿ. ಈ ವಿಚಾರವನ್ನು ಬಿಜೆಪಿ ನಾಯಕರು ಒಪ್ಪುತ್ತೀರಾ…? ಎಂದರು.