ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳ ಜಂಟಿ ಆಶ್ರಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇನ್ಸೋಲ್ವೆನ್ಸಿ ಆಂಡ್ ಬ್ಯಾಂಕ್ರಾಪ್ಸಿ ಬೋರ್ಡ್ (ದಿವಾಳಿತನ ಮಂಡಳಿ) ಇದರ ನೋಂದಾಯಿತ ಮೌಲ್ಯಮಾಪಕರು, ಎಂ.ಆರ್.ಪಿ.ಎಲ್. ಮಂಗಳೂರು ಇದರ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಹಾಗೂ ಚಾರ್ಟರ್ಡ್ ಇಂಜಿನಿಯರ್ ಶ್ರೀ ಎಚ್. ನರೇಶ್ ರಾಮದಾಸ್ ಕಿಣಿ ಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದರು ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Technical Talk 02

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರು ಹಾಗೂ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಭಾರ ಮುಖ್ಯಸ್ಥರಾದ ಡಾ. ಬಿ.ಎಂ. ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉದ್ಘಾಟನಾ ಭಾಷಣವನ್ನು ಮಾಡಿದ ಶ್ರೀ ಎಚ್. ನರೇಶ್ ರಾಮದಾಸ್ ಕಿಣಿ ಯವರು, “ಹ್ಯೂಮನ್ ರಿಸೋರ್ಸಸ್ ಪ್ರ್ಯಾಕ್ಟಿಸಸ್ ಇನ್ ಇಂಡಸ್ಟ್ರಿ” (ಕೈಗಾರಿಕೆಯಲ್ಲಿ ಮಾನವ ಸಂಪನ್ಮೂಲ ಅಭ್ಯಾಸಗಳು) ವಿಷಯದ ಮೇಲೆ ತಾಂತ್ರಿಕ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶಂಕರಪ್ಪ ಕಲ್ಗುಡಿ ಯವರು ಸ್ವಾಗತ ಭಾಷಣವನ್ನು ಮಾಡಿದರು. ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಶ್ವಾಸ್ ಶೆಟ್ಟಿ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರು. ಪ್ರೊ. ಸಾಯಿ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಜೆ. ಸೂರ್ಯಪ್ರಸಾದ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಉಪನ್ಯಾಸಕರಾದ ಪ್ರೊ. ರಾಘವೇಂದ್ರ ಬಾಳಿಗಾ, ಪ್ರೊ. ತ್ರಿವಿಕ್ರಮ ಪ್ರಭು, ಡಾ. ಧನಂಜಯ, ಪ್ರೊ. ಪಿ. ನವೀನ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆ “ಏಮ್ಸ್” ಅಧ್ಯಕ್ಷರಾದ ಕುಮಾರಿ ಆರ್. ತೇಜಸ್ವಿನಿ, ಕಾರ್ಯದರ್ಶಿ ಶ್ರೀ ಆರನ್ ಜತ್ತನ್ನ, ಖಜಾಂಚಿ ಕುಮಾರಿ ನಿಕಿತಾ ರಚನಾ, ಸಂಯೋಜಕ ಶ್ರೀ ಯಶಸ್ ಶೆಟ್ಟಿ, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆ “ಸೃಷ್ಟಿಕ” ಅಧ್ಯಕ್ಷರಾದ ಶ್ರೀ ವರುಣ್ ಎನ್ ಮಧ್ಯಸ್ಥ, ಉಪಾಧ್ಯಕ್ಷ ಶ್ರೀ ರಾಹುಲ್ ರಾಜೇಶ್ ರೈ, ಕಾರ್ಯದರ್ಶಿ ಶ್ರೀ ರತನ್ ರಮೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.